Advertisement

PM modi ಅವರಿಗೆ ಚೆಸ್‌ ಬೋರ್ಡ್‌ ಉಡುಗೊರೆಯಿತ್ತ ಕಿಶನ್‌ ಗಂಗೊಳ್ಳಿ

12:21 AM Nov 03, 2023 | Team Udayavani |

ಕುಂದಾಪುರ: ಚೀನದ ಹ್ಯಾಂಗ್‌ಝೂನಲ್ಲಿ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ವಿಜೇತ ಭಾರತದ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಎರಡು ಪದಕ ಗೆದ್ದ ಚೆಸ್‌ಪಟು ಕಿಶನ್‌ ಗಂಗೊಳ್ಳಿ ಅವರು ಪ್ರಧಾನಿಗೆ ಚೆಸ್‌ ಬೋರ್ಡ್‌ ಒಂದನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಹ್ಯಾಂಗ್‌ಝೂ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಪ್ಯಾರಾ ಆ್ಯತ್ಲೀಟ್‌ಗಳಿಗೆ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಈ ಸಂದರ್ಭದಲ್ಲಿ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದ ಸಾಧನೆಗೈದಿರುವ ಕಿಶನ್‌ಗೆ ಪ್ರಧಾನಿಯವರನ್ನು ಭೇಟಿ ಯಾಗುವ ಅವಕಾಶ ಒದಗಿ ಬಂದಿತ್ತು.

ಚೆಸ್‌ನಲ್ಲಿ ಕಳೆದ 10 ವರ್ಷಗಳಿಂದ ಅಂತಾರಾಷ್ಟಿÅàಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕಿಶನ್‌ ಗಂಗೊಳ್ಳಿ ಪ್ರಸ್ತುತ ಶಿವಮೊಗ್ಗದ ವಿನೋಬಾ ನಗರದಲ್ಲಿ ತಾಯಿ ಗೀತಾ ಜತೆ ನೆಲೆಸಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು.

Advertisement

Udayavani is now on Telegram. Click here to join our channel and stay updated with the latest news.

Next