Advertisement

ತಿದ್ದುಪಡಿ ಕಾಯ್ದೆಗೆ ಕಿಸಾನ್‌ ಸಂಘ ವಿರೋಧ

08:20 AM Aug 04, 2020 | Suhan S |

ಯಳಂದೂರು: ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನವಾಗಿದೆ. ಇದನ್ನು ಕೂಡಲೇ ರದ್ದುಮಾಡಬೇಕು ಎಂದು ಭಾರತೀಯ ಕಿಸಾನ್‌ ಸಂಘದ ಸದಸ್ಯರು ಉಪತಹಶೀಲ್ದಾರ್‌ ವೈ.ಎಂ. ನಂಜಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Advertisement

ಸಂಘದ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, 1961ರ ಭೂ ಸುಧಾರಣಾ ಕಾಯ್ದೆಯಲ್ಲಿರುವ 79 ಎಸಿಬಿ ಮತ್ತು 80ನೇ ಕಾಲಂಗಳನ್ನು ರದ್ದುಗೊಳಿಸಿ, ಕೃಷಿ ಭೂಮಿಯ ಖರೀದಿ ಮಿತಿಯನ್ನು ಹೆಚ್ಚುಗೊಳಿಸುವ ಕಲಂ 63ಕ್ಕೆ ಬದಲಾವಣೆಯನ್ನು ತರುತ್ತಿರುವ ಕ್ರಮ ಸರಿಯಾಗಿಲ್ಲ. ಈ ನಿರ್ಧಾರದಿಂದ ಕೃಷಿ ಕ್ಷೇತ್ರ ಸರ್ವನಾಶವಾಗುತ್ತದೆ ಎಂದರು.

ರೈತರಿಗೆ ಕೋವಿಡ್‌ ಸಂಕಷ್ಟ: ಕೋವಿಡ್‌ ಸಂಕಷ್ಟದಿಂದ ರೈತರು ಪರದಾಡುತ್ತಿದ್ದಾರೆ. ಮಾನವ ಕುಲವೇ ತತ್ತರಿಸಿರುವ ಇಂತಹ ಸಂದರ್ಭದಲ್ಲಿ ರೈತರ ಮರಣ ಶಾಸಕನವಾಗಿರುವ ಈ ಕಾನೂನು ಜಾರಿಯಾದರೆ, ಗ್ರಾಮೀಣ ಭಾಗದ ರೈತರು ಬೀದಿಗೆ ಬೀಳಲಿದ್ದಾರೆ. ಉಳ್ಳವರ ಪಾಲಿಗೆ ಜಮೀನು ಸೇರಲಿದೆ. ಈ ಬಗ್ಗೆ ಸರ್ಕಾರ ಕೃಷಿ ಪರಿಣಿತರ ರೈತರ ಸಲಹೆಗಳನ್ನು  ಪಾಲಿಸದೆ ಏಕಾಏಕಿ ನಿರ್ಧಾರ ಮಾಡಿರುವುದು ಸರಿಯಲ್ಲ. ಇದಕ್ಕೆ ಸದನದ ಕಲಾಪಗಳೂ ಇಲ್ಲದ ಕಾಲದಲ್ಲಿ ವಿಷಯ ಚರ್ಚೆಗೊಳ್ಳದೆ ನಿರ್ಧಾರ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಇದನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಉಪ ತಹಶೀಲ್ದಾರ್‌ ವೈ.ಎಂ.ನಂಜಯ್ಯರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಹೋಬಳಿ ಅಧ್ಯಕ್ಷ ನಾಗಪ್ಪ, ಶಾಂತರಾಜು, ಚೇತನ್‌, ಸೋಮಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next