Advertisement
ತಾಲೂಕಿನಲ್ಲಿ ಒಟ್ಟಾರೆಯಾಗಿ 57,143 ಮಂದಿ ಪಿಎಂಕೆಎಸ್‌ವೈ ಯೋಜನೆಯಡಿ ನೋಂದಣಿಪಡೆದಿದ್ದರು. 55,597 ಮಂದಿ ರೈತರು ಇದರಲಾಭ ಪಡೆಯುತ್ತಿದ್ದಾರೆ, ಇನ್ನು 487 ರೈತರ ಕೃಷಿಭೂಮಿ ಹೊಂದಿದ್ದರೂಖಾತೆಯಲ್ಲಿ ಲೋಪವಿದ್ದು, ಸರ್ಕಾರವೇ ಹಣ ತಡೆ ಹಿಡಿದಿದೆ. ಇನ್ನು 1,059 ಮಂದಿ ರೈತರು ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಗೆ ಉಳಿದಿದ್ದು ಇದಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.
Related Articles
Advertisement
ಕಸಬಾದಿಂದ 71, ಹಿರೀಸಾವೆ 68, ದಂಡಿಗನಹಳ್ಳಿ 42, ಬಾಗೂರು 86, ಶ್ರವಣಬೆಳಗೊಳ 85, ನುಗ್ಗೇ ಹಳ್ಳಿ 46 ಮಂದಿ ರೈತರು ಫೆ.1.2019ರ ನಂತರ ಕೃಷಿಭೂಮಿ ಹೊಸದಾಗಿ ಖರೀದಿ ಮಾಡಿದ್ದು, ಇಲ್ಲವೆಪೌತಿ ಖಾತೆ ಮಾಡಿಸಿಕೊಂಡಿದ್ದಾರೆ. ಅವರಿಗೆಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಈವರೆಗೆಬಂದಿಲ್ಲ, ಇನ್ನು ಆರು ಹೋಬಳಿಯಿಂದ 73 ರೈತರಹೆಸರಿನಲ್ಲಿ ಕೃಷಿ ಭೂಮಿ ಖಾತೆಹೊಂದಿದ್ದರೂ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದಲ್ಲಿ ಅಪ್‌ಲೋಡ್ ಆಗದ ಪರಿಣಾಮ ಈವರೆಗೆ ಸಹಾಯ ಧನದಿಂದ ಹೊರಗೆ ಉಳಿದಿದ್ದಾರೆ.
ಶೇ.70 ಪೂರ್ಣ: ತಾಲೂಕಿನಲ್ಲಿ ಅಂದಾಜಿನಪ್ರಕಾರ 1.20500 ಕೃಷಿಕರಿದ್ದು, ಅವರಲ್ಲಿ 57143 ರೈತರು ಪಿಎಂಕೆಎಸ್‌ವೈನಲ್ಲಿ ನೋಂದಣಿ ಮಾಡಿದಿದ್ದಾರೆ. ಒಂದು ಲಕ್ಷ ರೈತರಲ್ಲಿ 10 ಸಾವಿರ ರೈತರಪಾವತಿ ಖಾತೆ ಮಾಡಬೇಕಿದ್ದು, ಈ ಯೋಜನೆ ಒಳಪಟ್ಟಿಲ್ಲ, 10 ಸಾವಿರ ಮಂದಿ ಗ್ರಾಮದಲ್ಲಿ ವಾಸವಾಗಿಲ್ಲ, 6 ಸಾವಿರ ಮಂದಿ ರೈತರು ಕೃಷಿ ರಹಿತಭೂಮಿ ಹೊಂದಿದ್ದಾರೆ. ಸಾವಿರಾರು ಮಂದಿ ಕೃಷಿಭೂಮಿ ಹೊಂದಿದ್ದು, ವ್ಯವಸಾಯ ಮಾಡುತ್ತಿದ್ದುಸೂಕ್ತ ದಾಖಲೆ ಹೊಂದಿಲ್ಲ. ಸರ್ಕಾರಿ ಇಲಾಖೆ ಸಿಬ್ಬಂದಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವವರು, ತಾಪಂ ಹಾಲಿ, ಮಾಜಿ, ಜಿಪಂ ಹಾಲಿ, ಮಾಜಿ, ಲೋಕಸಭೆ ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಹಾಲಿ, ಮಾಜಿ ಸದಸ್ಯರು, ರಾಜ್ಯಸಭಾಸದಸ್ಯರು ಹೀಗೆ ಜನಪ್ರತಿನಿಧಿಗಳು ಜನಸೇವೆಮಾಡುವ ಹಾಲಿ, ಮಾಜಿ ಜನಪ್ರತಿನಿಧಿಗಳು ಈ ಯೋಜನೆಯಿಂದ ಹೊರಗೆ ಉಳಿದಿದ್ದಾರೆ.
ಕೃಷಿ ಸಾಲ ಮನ್ನಾಯೋಜನೆ ಉಳ್ಳವರ ಪಾಲಾಗುತ್ತಿದೆ.ಕೇಂದ್ರ ಸರ್ಕಾರ ಎಲ್ಲ ರೈತರಿಗೂ ವಾರ್ಷಿಕ 6 ಸಾವಿರ ರೂ. ಹಣಖಾತೆಗೆ ಜಮಾ ಮಾಡುತ್ತಿದೆ. ಇನ್ನು ರಾಜ್ಯಸರ್ಕಾರ ಸಹ ವಾರ್ಷಿಕ 4 ಸಾವಿರ ರೂ.ನೀಡುವ ಮೂಲಕ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. –ಕೆ.ಬಿ.ಶಿವಶಂಕರ್, ಕಾಂತರಾಜಪುರ, ಕೃಷಿಕ
–ಶಾಮಸುಂದರ್ ಕೆ.ಅಣ್ಣೇನಹಳ್ಳಿ