ಬೆಂಗಳೂರು : ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾ ಜೊತೆಗೆ ಅಂಟಿಕೊಂಡಿದ್ದ ವಿವಾದವೊಂದು ಇದೀಗ ಸುಖಾಂತ್ಯ ಕಂಡಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 2016ರಲ್ಲಿ ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಚಿತ್ರದ ‘ಮಧ್ಯರಾತ್ರಿಲಿ ಹೈವೇ ರಸ್ತೇಲಿ’ ಹಾಡನ್ನು ನಕಲು ಮಾಡಿ ‘ Hey who are you’ ಹಾಡು ಮಾಡಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ದೂರು ನೀಡಿದ್ದರು. ಸಿನಿಮಾ ಬಿಡುಗಡೆ ಸಮಯದಲ್ಲಿ ಲಹರಿ ಸಂಸ್ಥೆ ಕೇಸ್ ದಾಖಲಿಸಿತ್ತು.
ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸೌದಾರ್ಯಯುತವಾಗಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ರಕ್ಷಿತ್ ಶೆಟ್ಟಿ ಹಾಗೂ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಮುನಿಸು ಮರೆತು ಒಂದಾಗಿದ್ದಾರೆ.
ಇಂದು (ಜೂನ್ 29) ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ, ಲಹರಿ ವೇಲು ಜೊತೆ ಫೋಟೋ ಶೇರ್ ಮಾಡಿದ್ದು, “ಒಂದು ಘಟನೆ, ಅನೇಕ ದೃಷ್ಟಿಕೋನಗಳು ಮತ್ತು ಆ ದೃಷ್ಟಿಕೋನಗಳನ್ನು ಹಂಚಿಕೊಂಡಾಗ ಮತ್ತು ಅರ್ಥಮಾಡಿಕೊಂಡಾಗ ನಾವು ಮಾನವರಂತೆ ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲವೂ ಪ್ರೀತಿ ಮತ್ತು ಪರಸ್ಪರ ಗೌರವದ ಸಂದರ್ಭದಲ್ಲಿ ಭೇಟಿಯಾದಾಗ. ಅದು ನಿಜವಾದ ಏಕೈಕ ಬೆಳವಣಿಗೆ” ಎಂದು ಬರೆದುಕೊಂಡಿದ್ದಾರೆ.