Advertisement

ಶೂಟಿಂಗ್‌ ನಲ್ಲಿ ಬಿಝಿಯಾದ ‘ಬಹದ್ದೂರ್‌ ಗಂಡು’

12:40 PM Jan 27, 2022 | Team Udayavani |

ಕಿರುತೆರೆಯ “ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟ ಕಿರಣ್‌ ರಾಜ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಬಹದ್ದೂರ್‌ ಗಂಡು’ ಚಿತ್ರದ ಚಿತ್ರೀಕರಣ ಭರದಿಂಣದ ಸಾಗಿದೆ. ಸದ್ಯ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ನಂದಿ ಬೆಟ್ಟದ ಸಮೀಪ ಚಿತ್ರೀಕರಣ ನಡೆಸುತ್ತಿದೆ.

Advertisement

ಇನ್ನು ನಾಯಕ ನಟ ಕಿರಣ್‌ ರಾಜ್‌ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಕಲಿತಿದ್ದಾರಂತೆ. ಕಿರಣ್‌ ರಾಜ್‌ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತಿದ್ದು, ಸಾಹಸ ನಿರ್ದೇಶಕ ವಿನೋದ್‌ ಅವರ ಸಾಹಸ ಸಂಯೋಜನೆಯಲ್ಲಿ ಈ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.

ಇನ್ನು “ಬಹದ್ದೂರ್‌ ಗಂಡು’ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿಯಂತೆ. ಆ್ಯಕ್ಷನ್‌ ಚಿತ್ರದ ಹೈಲೈಟ್ಸ್‌ಗಳಲ್ಲಿ ಒಂದಾಗಲಿದೆ ಎನ್ನುತ್ತದೆ ಚಿತ್ರತಂಡ. “ಪ್ರಸಿದ್ಧ್ ಸಿನಿಮಾಸ್‌’ ಮತ್ತು ರಮೇಶ್‌ ರೆಡ್ಡಿ “ಬಹದ್ದೂರ್‌ ಗಂಡು’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜನೆಯಿದೆ. ಚಿತ್ರದ ಹಾಡುಗಳಿಗೆ ಮೋಹನ್‌ ನೃತ್ಯ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ:ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಚಿತ್ರದಲ್ಲಿ ನಾಯಕ ಕಿರಣ್‌ ರಾಜ್‌ಗೆ ಯಶಾ ಶಿವಕುಮಾರ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ರಮೇಶ್‌ ಭಟ್‌, ವೀಣಾ ಸುಂದರ್‌, ಜಯಶ್ರೀ ರಾಜ್‌, ರಾಕೇಶ್‌ ರಾಜ್‌, ಸುರೇಖಾ, ನಾಗೇಶ್‌ ರೋಹಿತ್‌, ಶಬರಿ ಮಂಜು, ಮಡೆನೂರ್‌ ಮನು, ಗೋವಿಂದೇ ಗೌಡ, ವಾಣಿ, ರಂಜಿತ್‌ ಖನ್ನಾ ಮುಂತಾದವರು “ಬಹದ್ದೂರ್‌ ಗಂಡು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next