Advertisement

ಹೊಸ ಚಿತ್ರದಲ್ಲಿ ಕಿರಣ್‌ ರಾಜ್‌; ‘ಭರ್ಜರಿ ಗಂಡು’ತಂಡದಿಂದ ಮತ್ತೊಂದು ಸಿನಿಮಾ

02:06 PM Apr 17, 2022 | Team Udayavani |

ಕಿರುತೆರೆ ಖ್ಯಾತಿಯ ನಟ ಕಿರಣ್‌ ರಾಜ್‌ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವು ತಿಳಿದ ವಿಚಾರ. ಇನ್ನು ಕಿರಣ್‌ ರಾಜ್‌ ನಟನೆಯ, ಪ್ರಸಿಧ್ ನಿರ್ದೇಶಿಸುತ್ತಿರುವ “ಭರ್ಜರಿ ಗಂಡು’ ಚಿತ್ರದ ಚಿತ್ರೀಕರಣ ಪೂರ್ಣವಾಗಿ, ಡಬ್ಬಿಂಗ್‌ಗೂ ನಡೆಯುತ್ತಿದೆ.

Advertisement

ಈ ಚಿತ್ರ ಬಿಡುಗಡೆಗೂ ಮುನ್ನವೇ ಕಿರಣ್‌ ರಾಜ್‌ ಮತ್ತೂಂದು ಚಿತ್ರದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ. ಪ್ರಸಿಧ್ ಕೃಷ್ಣ ಹಾಗೂ ಕಿರಣ್‌ ರಾಜ್‌ ಕಾಂಬಿನೇಶನ್‌ನಲ್ಲಿ ಮತ್ತೂಂದು ಭರ್ಜರಿ ಆಕ್ಷನ್‌ ಓರಿಯೆಂಟೆಡ್‌ ಚಿತ್ರ ಆರಂಭವಾಗುತ್ತಿದೆ. ಈ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು.

ಪ್ರಸಿಧ್ ಫಿಲಂ ಲಾಂಛನದಲ್ಲಿ ಭರ್ಜರಿ ಗಂಡು ಚಿತ್ರ ನಿರ್ಮಾಣವಾಗುತ್ತಿದ್ದು, ಅದೇ ಬ್ಯಾನರ್‌ನಲ್ಲಿ ಈ ಚಿತ್ರ ಕೂಡ ನಿರ್ಮಾಣವಾಗಲಿದೆ. ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.ಚಿತ್ರತಂಡದ ಸದಸ್ಯರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ಚಿತ್ರದಲ್ಲಿ ಕಿರಣ್‌ ರಾಜ್‌ ಪಕ್ಕಾ ಲೋಕಲ್‌ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಕಿರಣ್‌ ರಾಜ್‌ ಅವರಿಗೆ ನಾಯಕಿಯಾಗಿ ಸುರೇಖ ಅಭಿನಯಿಸಲಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಶೀರ್ಷಿಕೆ ಸಹ ಅನಾವರಣಗೊಳ್ಳಲಿದೆ. ಸುದರ್ಶನ್‌ ಸುಂದರರಾಜ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುಮ್ಮಿನೇನಿ ವಿಜಯ್‌ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ವಿನೋದ್‌ ಸಾಹಸ ನಿರ್ದೇಶನ ಹಾಗೂ ವೆಂಕಿ ಯುಡಿವಿ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next