Advertisement
ಅವರು ಫೆ. 8ರಂದು ಕಿನ್ನಿಗೋಳಿ ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸಭಾಭವನದಲ್ಲಿ ಗ್ರಾ.ಪಂ.ನ ತಾಳಿಪಾಡಿ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸಂಬಂಧಪಟ್ಟಂತೆ ಕಾಮಗಾರಿ ಗುಚ್ಛ ತಯಾರಿಸಲು ನಡೆದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯವಾಗಿ 50 ಲಕ್ಷ ರೂ. ವೆಚ್ಚದಲ್ಲಿ 10 ರಸ್ತೆಗಳ ಅಭಿವೃದ್ಧಿ ಡಾಮರೀಕರಣ ಹಾಗೂ ಕಾಂಕ್ರೀಟ್ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೆ ಪಿಡಿಒ ಅರುಣ್ ಪ್ರದೀಪ್ ಡಿ’ಸೋಜಾ, ಈ ಬಗ್ಗೆ ಗ್ರಾಮ ಸಭೆ ಅಥವಾ ವಾರ್ಡ್ ಸಭೆಯಲ್ಲಿ ಕೇಳಿ ಎಂದರು. ಹೊಸಕಾವೇರಿ ರಸ್ತೆ ಮೂರು ವರ್ಷದಿಂದ ದುರಸ್ತಿ ಆಗಿಲ್ಲ. ದುರಸ್ತಿ ಮಾಡಲೆಂದು ಆಗೆದ ರಸ್ತೆ ಹಾಗೆಯೇ ಇದೆ. ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರಿಯಾ ಯೋಜನೆಯಲ್ಲಿ ಹಣ ಮಂಜೂರು ಆಗಿದೆ. ಹೀಗಾಗಿ ಕಾಮಗಾರಿ ನಡೆಯುವ ಭರವಸೆ ಇದೆ. ಹೆಚ್ಚಿನ ಅನುದಾನ ನೀಡಿ ರಸ್ತೆ ಸರಿಪಡಿಸಿ ಎಂದು ಗ್ರಾಮಸ್ಥರಾದ ಬಿ.ಪಿ. ನಾರಾಯಣ ಹಾಗೂ ನಳಿನಿ ಒತ್ತಾಯಿಸಿದರು.
Related Articles
Advertisement