Advertisement

ಕಿನ್ನಿಗೋಳಿ: ಪಾಳು ಬೀಳುವ ಸ್ಥಿತಿಯಲ್ಲಿ ಕಿನ್ನಿಗೋಳಿ ಹಳೆ ಪಶು ಆಸ್ಪತ್ರೆ ಕಟ್ಟಡ

03:01 PM Jul 17, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಸಮೀಪದ ಮೆನ್ನಬೆಟ್ಟು ಗ್ರಾಮದಲ್ಲಿನ ಹಳೆಯ ಪಶು ವೈದ್ಯಕೀಯ ಆಸ್ಪತ್ರೆ ಇದೀಗ ಪಾಳು ಕೊಂಪೆಯ ಕಟ್ಟಡವಾಗಿದೆ. ಕಿನ್ನಿಗೋಳಿ ಹೊಸ ಪಶು ವೈದ್ಯಕೀಯ ಆಸ್ಪತ್ರೆ ಆದ ಬಳಿಕ ಹಳೆಯ ಕಟ್ಟಡ ನಿರುಪಯೋಗಿ ಕಟ್ಟಡ ಆಗಿದೆ.

Advertisement

ಯಾವುದಾದರೂ ಅಂಗನವಾಡಿ ಅಥವಾ ಸರಕಾರಿ ಆಸ್ಪತ್ರೆ ಇನ್ನಿತರ ಸರಕಾರಿ ಕಚೇರಿಗಳನ್ನು ಮಾಡಿ ಈ ಪಾಳು ಬಿದ್ದ ಕಟ್ಟಡಕ್ಕೆ
ಮರು ಜೀವ ನೀಡಬಹುದು. ಉತ್ತಮ ಸ್ಥಿತಿಯಲ್ಲಿ ಕಟ್ಟಡ 55ವರ್ಷಗಳ ಹಿಂದಿನ ಕೆಲವು ಕೊಠಡಿ ಹೆಂಚಿನ ಛಾವಣಿ ಹೊಂದಿದ್ದು,
ಉಳಿದ ಕೊಠಡಿಗಳು ಕಾಂಕ್ರೀಟ್‌ ದ್ದಾಗಿದೆ. ಸದ್ಯದ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ಇದ್ದು ಈಗೆಯೇ ಬಿಟ್ಟರೆ ಪಾಳು ಕೊಂಪೆಯಾಗುವ ಸಾಧ್ಯವಿದೆ. ಸುತ್ತಮುತ್ತಲು ಗಿಡಗಂಟಿಗಳು ಬೆಳೆದುಕೊಂಡಿದೆ.

ಸರಕಾರಿ ಕಚೇರಿಗಳನ್ನು ತೆರೆಯಬಹುದು ಕಿನ್ನಿಗೋಳಿ ಪಶು ವೈದ್ಯಕೀಯ ಆಸ್ಪತ್ರೆ ಸುಮಾರು 2. 67 ಎಕರೆ ಜಮೀನು ಇದ್ದು
ಮುಂದಕ್ಕೆ ಒತ್ತುವರಿ ಆಗಿ ಸರಕಾರಿ ಜಾಗ ಮಾಯವಾಗಬಹದು. ಕಿನ್ನಿಗೋಳಿ ಪೇಟೆಯಿಂದ 500 ಮೀಟರ್‌ ದೂರದಲ್ಲಿರುವ ಈ ಹಳೆಯ ಕಟ್ಟಡದಲ್ಲಿ 5ರಿಂದ 6 ಕೊಠಡಿಗಳಿವೆ. ಕಿನ್ನಿ ಗೋಳಿ ಜನತೆ ನಾನಾ ಸರಕಾರಿ ಕಚೇರಿಗಳ ಅವ ಶ್ಯಕತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪೊಲೀಸ್‌ ಉಪ ಠಾಣೆ, ಸರಕಾರಿ ಐಟಿಐ ಸಹಿತ ಅಗತ್ಯ ಸರಕಾರಿ ಕಚೇರಿ ಇರುವ ಸಂಕೀರ್ಣ ಮಾಡಬಹುದು.

ಪತ್ರ ಬರೆಯಲಾಗಿದೆ
ಮೆನ್ನಬೆಟ್ಟುವಿನಲ್ಲಿ ನಮ್ಮ ಕ್ಲಿನಿಕ್‌ ಮಾಡುವ ಉದ್ದೇಶ ಇದ್ದರೆ ಈ ಕಟ್ಟಡವನ್ನು ಬಳಸಬಹದು. ಇದರಿಂದ ಇಲ್ಲಿನ ಗ್ರಾಮದ ಜನರಿಗೆ ಪ್ರಯೋಜನವಾಗಬಹುದು. ಈ ಬಗ್ಗೆ ಜಿಲ್ಲಾ ಪಂಚಾಯತ್‌, ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ.
*ಕಿಶೋರ್‌ ಭಂಡಾರಿ, ಸಾಮಾಜಿಕ ಕಾರ್ಯಕರ್ತ

ಪರಿಗಣನೆ ಮಾಡಬಹುದು
ಮೂಲ್ಕಿ ತಾಲೂಕಿನ ಮನ್ನಬೆಟ್ಟು ಗ್ರಾಮಕ್ಕೆ ನಮ್ಮ ಕ್ಲಿನಿಕ್‌ ಮಂಜೂರು ಮಾಡುವ ಪ್ರಸ್ತಾವನೆ ಜಿಲ್ಲಾ ಮಟ್ಟದಲ್ಲಿ ಇದ್ದು ಮುಂದಕ್ಕೆ ಆರೋಗ್ಯ ಇಲಾಖೆ ಈ ಪಶುವೈದ್ಯಕೀಯ ಕಟ್ಟಡವನ್ನು ಪರಿಗಣನೆ ಮಾಡಬಹುದು.
*ಉಮನಾಥ ಕೋಟ್ಯಾನ್‌, ಶಾಸಕರು

Advertisement

*ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next