Advertisement
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದ ವೇಳೆ ಎಸ್. ಅಂಗಾರ ಅವರು ಕಚೇರಿಗಾಗಿ ಹುಡುಕಾಡುತ್ತಿದ್ದಾಗ ಸ್ಟೇಟ್‌ಬ್ಯಾಂಕ್- ರೊಸಾರಿಯೋ ಚರ್ಚ್ ರಸ್ತೆಯಯಲ್ಲಿ ಹ್ಯಾಮಿಲ್ಟನ್ ವೃತ್ತದ ಪಕ್ಕದಲ್ಲೇ ಬಲಭಾಗದಲ್ಲಿರುವ “ಮರೈನ್ ಬಂಗಲೆ’ಯ ಬಗ್ಗೆ ತಿಳಿದು ಬಂದಿದೆ. ಪಾಳು ಬಿದ್ದಿದ್ದ ಬಂಗಲೆಯನ್ನು ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಿಸಿ ತಮ್ಮ ಕಚೇರಿಯನ್ನಾಗಿ ಬಳಕೆ ಮಾಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇರುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗಿತ್ತು.
Related Articles
Advertisement
ಕಟ್ಟಡದ ಕುರಿತು
ಬ್ರಿಟಿಷ್ ಆಡಳಿತ ಅವಧಿಯಲ್ಲಿ ನಗರದ ಹಳೆ ಬಂದರು ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿತ್ತು. ಆದ್ದರಿಂದ 1918ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. ಮರೈನ್ ಬಂಗಲೆ ಎಂದೇ ಗುರುತಿಸಲ್ಪಟ್ಟಿದ್ದ ಈ ಕಟ್ಟಡ ಸ್ವಾತಂತ್ರ್ಯದ ಬಳಿಕ ಬಂದರು ವಿಶ್ವಸ್ಥ ಮಂಡಳಿ (ಪೋರ್ಟ್ ಟ್ರಸ್ಟ್)ಗೆ ಒಳಪಟ್ಟಿತ್ತು. 1980 ರಲ್ಲಿ ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ವ್ಯಾಪ್ತಿಗೆ ಸೇರಿದ ಮರೈನ್ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು.
ಕಟ್ಟಡ ಉಳಿಸಿಕೊಳ್ಳಲು ಕ್ರಮ
ಕಟ್ಟಡದ ಅವರಣವನ್ನು ಶೀಘ್ರ ಸ್ವತ್ಛಗೊಳಿಸಲಾಗುವುದು. ಆಂಗ್ಲರ ಕಾಲದ ಈ ಭವ್ಯ ಪಾರಂಪರಿಕ ಕಟ್ಟಡವನ್ನು ಹಾಗೇ ಉಳಿಸುವ ಉದ್ದೇಶ ಹೊಂದಲಾಗಿದೆ. ಕಟ್ಟಡವನ್ನು ಉಪಯೋಗಿಸಬೇಕು ಎನ್ನುವ ದೃಷ್ಟಿಯಿಂದ ಕರ್ನಾಟಕ ಮೆರಿಟೈಮ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. -ಧರೇಂದ್ರ ಕುಮಾರ್,ಆಡಳಿತ ಅಧಿಕಾರಿ, ಮಂಗಳೂರಿನ ಬಂದರು ಇಲಾಖೆ – ಭರತ್ ಶೆಟ್ಟಿಗಾರ್