ಕಿನ್ನಿಗೋಳಿ: ಹಿರಿಯ ಪತ್ರಕರ್ತ, ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ ಅವರು ಅನಂತ ಪ್ರಕಾಶ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ನಾಗಾರಾಧನೆ, ದೈವಾರಾಧನೆ, ಸಿರಿ ಆರಾಧನೆ ಅಲ್ಲದೆ ನೂರಾರು ದೇಗುಲ ಗಳ ಬಗ್ಗೆ ವಿಶೇಷ ಸಂಶೋಧನ ಬರಹಗಳನ್ನು ಪ್ರಕಟಿಸಿದ್ದಾರೆ. ವಿರಾಟ್ ದರ್ಶನ, ಶ್ರೀ ದುರ್ಗಾದರ್ಶನ, ಕಟೀಲು ಶ್ರೀ ದುರ್ಗಾ ದರ್ಶನ, ಅಣಿ ಅರದಲ, ಭಾರ್ಗವರಾಮ, ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಸುಮಾರು 40ಕ್ಕೂ
ಹೆಚ್ಚು ಕೃತಿ ರಚಿಸಿದ್ದಾರೆ.
ಪುರಸ್ಕಾರವು ಕುಂಡಂತಾ ಯರ ಸಾಹಿತ್ಯ ಸಾಧನೆಗಳ ಕುರಿತಾದ ಪರಿಚಯ ಕೃತಿ ಹಾಗೂ ರೂ. 10,000 ಒಳಗೊಂಡಿದೆ. ಸೆ. 1ರ ರವಿವಾರ ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆ ಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನಂತ ಪ್ರಕಾಶನ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.