Advertisement
ಮಳೆಗಾಲ ಇನ್ನೂ ಪೂರ್ತಿ ಮುಗಿದಿಲ್ಲ. ಕಿನ್ನಿಗೋಳಿ ರಾಜಾಂಗಣದ ಬಳಿಯ ದೊಡ್ಡ ಹೊಂಡದಲ್ಲಿ ಕನಿಷ್ಟ ಹತ್ತು ಜನರು ಬಿದ್ದು ಗಾಯಗೊಂಡಿದ್ದಾರೆ. ಮೂರುಕಾವೇರಿ, ಕಿನ್ನಿಗೋಳಿ ಪ.ಪಂ., ಭಟ್ಟಕೋಡಿ, ಪುನರೂರು, ಪದ್ಮನೂರು ಕೆರೆಕಾಡು, ಕೆಂಚನಕೆರೆಯ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಚಾಲಕರಿಗೆ ಹೆಚ್ಚಿನ ಹೊಂಡ ಗುಂಡಿಗಳು ಅಪಾಯಕಾರಿಯಾಗಿವೆ. ರಸೆಯು ಎಲ್ಲ ಕಡೆ ಉತ್ತಮವಾಗಿದೆ ಎಂದು ವೇಗವಾಗಿ ಚಲಿಸಿದರೆ ಗುಂಡಿಯ ಅರಿವು ಇಲ್ಲದೆ ದ್ವಿಚಕ್ರ ವಾಹನ ಗುಂಡಿಗೆ ಬಿದ್ದು ಮೂಳೆ ಮುರಿತ ಉಂಟಾಗುವುದು ಗ್ಯಾರಂಟಿ.
ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲಕ್ಕೆ ಮುನ್ನಾ ಸಣ್ಣ ಪುಟ್ಟ ಹೊಂಡ ತೇಪೆ ಕಾರ್ಯ ಹಾಗೂ ಹೆದ್ದಾರಿಯ ಬದಿಯ ಚರಂಡಿ ನಿರ್ವಹಣೆ ಮಾಡಿದರೇ ಇಂತಹ ಸಮಸ್ಯೆ ಆಗುತ್ತಿರಲ್ಲಿ, ಕೆಲವೆಡೆ ಚರಂಡಿಯ ಸಮಪರ್ಕ ನಿರ್ವಹಣೆ ಇಲ್ಲದೆ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಕೆರೆಕಾಡು, ಕೆಂಚನಕೆರೆ ಶಾಲೆಯ ಮುಂಭಾಗದಲ್ಲಿ ರಸ್ತೆಗಳು ಹದಗೆಟ್ಟು ಹೋಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಹಾಕಿದ ಫೆವರ್ ಫಿನಿಶ್ ಕಿತ್ತು ಹೋಗಿದೆ. ಹುಲ್ಲು ಗಿಡ- ಗಂಟಿ ಬೆಳೆದು ಸಂಕಷ್ಟ
ಕೆರೆಕಾಡು, ಹೊಸಕಾವೇರಿ, ಪುನರೂರು, ಕೆಂಚನಕೆರೆ ತಿರುವು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ದೊಡ್ಡ ಗಾತ್ರದಲ್ಲಿ ಹುಲ್ಲು ಗಿಡ- ಗಂಟಿಗಳು ಬೆಳೆದು ಪಾದಚಾರಿಗಳಿಗೆ ಸಂಚರಿಸಲು ಕಷ್ಟಸಾಧ್ಯವಾಗಿದೆ, ತಿರುವುನಲ್ಲಿ ಎದುರಿಗೆ ಬರುವ ವಾಹನವು ಗೋಚರವಾಗುತ್ತಿಲ್ಲ.
Related Articles
ಕಳೆದ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಉಂಟಾಗಿತ್ತು. ಬಳಿಕ ಸ್ವಲ್ಪ ತೇಪೆ ಕಾರ್ಯ ಮಾತ್ರ ಮಾಡಲಾಗಿತ್ತು. ಇದೀಗ ಮತ್ತೆ ತೇಪೆ ಹಾಕಿದ್ದು ಎದ್ದು ಹೋಗಿ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆ ಶಾಶ್ವತ ಪರಿಹಾರ ಆಗಬೇಕಾಗಿದೆ. ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ.
Advertisement
-ರಘನಾಥ ಕಾಮತ್ ಕೆಂಚನಕೆರೆ