Advertisement

ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ ಮಾದರಿ

12:30 AM Jan 17, 2019 | Team Udayavani |

ಕಾಸರಗೋಡು: 2018-19 ವರ್ಷದ ಜೈವಿಕ ಕೃಷಿಯಲ್ಲಿ ಅತ್ಯುತ್ತಮ ಸಾಧನೆ ನಡೆಸಿದ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಕಿನಾನೂರು-ಕರಿಂದಳಂ ಅನ್ನು ಕೃಷಿ ಇಲಾಖೆ ಆಯ್ಕೆ ಮಾಡಿದೆ. 

Advertisement

ಈ ಅವಧಿಯಲ್ಲಿ ಜೈವಿಕ ಕೃಷಿ ರೀತಿಯಲ್ಲಿ 124 ಟನ್‌ ಭತ್ತವನ್ನು ಉತ್ಪಾದಿಸಲಾಗಿದೆ. ಜತೆಗೆ 424 ಟನ್‌ ತರಕಾರಿಗಳನ್ನೂ ಬೆಳೆಯಲಾಗಿದೆ. ದ್ವಿತೀಯ ಹಂತದ ಬೆಳೆಯೂ ಈಗ ಕೊಯ್ಲಿನ ಹಂತದಲ್ಲಿದೆ. ಈ ಬಾರಿ ಸುಮಾರು 200 ಟನ್‌ ತರಕಾರಿಗಳ ಉತ್ಪಾದನೆ ನಿರೀಕ್ಷಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ

ಅನೇಕ ಯೋಜನೆಗಳು
ಜೈವಿಕ ಕೃಷಿ ವ್ಯಾಪಕಗೊಳಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪಂಚಾಯತ್‌ನ ಶೇ. 90 ಕೃಷಿಕರೂ ಜೈವಿಕ ಕ್ರಮದಲ್ಲೇ ಕೃಷಿ ನಡೆಸುತ್ತಿದ್ದಾರೆ. ಕೃಷಿಕರಿಗೆ  ಅಗತ್ಯವಾದ ತರಬೇತಿ ನೀಡಲಾಗಿದೆ. 

ಕೀಟಬಾಧೆ ನಿಯಂತ್ರಣ  
ಕೃಷಿ ವಲಯದ ಪ್ರಧಾನ ಸಮಸ್ಯೆಗಳಲ್ಲೊಂದಾದ ಕೀಟಬಾಧೆ ನಿಯಂತ್ರಣದಲ್ಲಿ ಪಂಚಾಯತ್‌ ನಡೆಸಿರುವ ಸಾಧನೆ ಇತರರಿಗೆ ಮಾದರಿಯಾಗಿದೆ.

ಪ್ರತಿ ವಾರ್ಡ್‌ನಲ್ಲೂ ಕೃಷಿಕರಿಗೆ ತರಕಾರಿ ಕ್ಲಸ್ಟರ್‌ಗಳನ್ನು ರಚಿಸಿ ಕೀಟ ನಿಯಂತ್ರಣ, ಜೈವಿಕ ಕೀಟನಾಶಕ ತಯಾರಿ ಇತ್ಯಾದಿಗಳ ಕುರಿತು ಕ್ರಿಯಾತ್ಮಕ ತರಬೇತಿ ನೀಡಲಾಗಿದೆ. ಕೀಳ್‌ ಮಾಲ,ಅಂಡೋಳ್‌ ಎಂಬ ಪ್ರದೇಶದ ಗದ್ದೆಗಳಲ್ಲಿ ಕೃಷಿಕರು ಜಯಂತಿ(ಮಲ್ಲಿಕಾ), ರಾಮಚ್ಚಂ ಸಸಿಗಳನ್ನು ನೆಟ್ಟು ಕೀಟಗಳ ಬಾಧೆ ಇರದಂತೆ ನೋಡಿಕೊಂಡಿದ್ದಾರೆ.
  
ಹಸುರೆಲೆ ಗೊಬ್ಬರ
ಜೈವಿಕ ಕೃಷಿಗೆ ಹಸುರೆಲೆ ಗೊಬ್ಬರಗಳು ಅನಿವಾರ್ಯ ವಾಗಿರುವ ಹಿನ್ನೆಲೆಯಲ್ಲಿ ಕೃಷಿ ಜಾಗಗಳ ಬದಿಯಲ್ಲೇ ಮರುತ್‌, ಶೀಮಕೊನ್ನೆ ಇತ್ಯಾದಿ ಔಷ ಧೀಯ ಸಸ್ಯಗಳನ್ನು ಬೆಳೆಸಲಾಗಿದೆ. ಜೈವಿಕ ಕೃಷಿಯೊಂದಿಗೆ ಪಶುಸಂಗೋಪನೆಗೂ ಇಲ್ಲಿ ಆದ್ಯತೆ ನೀಡಲಾಗಿದೆ ಸ್ಥಳದಲ್ಲೇ ಗೊಬ್ಬರ ತಯಾರಿ  ಬರಿದಾಗಿ ಇರುವ ಜಾಗಗಳಲ್ಲಿ ಜೈವಿಕ ಗೊಬ್ಬರ ಘಟಕಗಳನ್ನು ಸ್ಥಾಪಿಸಿ ಕೃಷಿಕರಿಗೆ ಬೇಕಾದ ಜೈವಿಕ ಗೊಬ್ಬರಗಳನ್ನು ನಿರ್ಮಿಸಿ ವಿತರಿಸಲಾಗಿದೆ. 

Advertisement

ಪೈಪ್‌ ಗೊಬ್ಬರ, ಎರೆ ಗೊಬ್ಬರ, 480 ಟನ್‌ ಗೊಬ್ಬರ ತಯಾರಿಸಿ ಕೃಷಿಕರಿಗೆ ವಿತರಿಸಲಾಗಿದೆ.ಹತ್ತು ಪಟ್ಟು ಅಧಿಕ ಗುರಿ ಹತ್ತು ಪಟ್ಟು ಅ ಧಿಕ ಬೆಳೆ ಮತ್ತು ಆದಾಯಗಳಿಸುವ ಯತ್ನದಲ್ಲಿ ಕಿನಾನೂರು-ಕರಿಂದಳಂ ಪಂಚಾಯತ್‌ಕೃಷಿಕರು ಮತ್ತು ಅಧಿಕಾರಿಗಐsದ್ದಾರೆ.

ಹುಲುಸಾಗಿ ಬೆಳೆದ ತರಕಾರಿ
ಜೈವಿಕ ರೀತಿಯ ಬೆಳೆಗಳಾದ ಭತ್ತ, ಬಾಳೆ, ಹರಿವೆ, ಬದನೆ, ಪಡುವಲ, ಟೊಮೆಟೊ, ಕಲ್ಲಂಗಡಿ, ನುಗ್ಗೆಕಾಯಿ ಇತ್ಯಾದಿ ತರಕಾರಿಗಳು, ಗೆಡ್ಡೆ-ಗೆಣಸು ಹುಲುಸಾಗಿ ಬೆಳೆದಿವೆ. ಜೈವಿಕ ಕೃಷಿಗೆ ಪೂರಕವಾಗಿ ಕೃಷಿ ಭವನ ಆಶ್ರಯದಲ್ಲಿ ಸ್ಥಾಪಿಸಲಾದ ಇಕೋಶಾಪ್‌ ಮೂಲಕ,ಜೈವಿಕ ಗೊಬ್ಬರಗಳು, ಇತರ ಜೈವಿಕ ಉತ್ಪನ್ನಗಳು, ಕೃಷಿಕರಿಂದ ಸಂಗ್ರಹಿ ಸಲಾದ ತಳಿಯ ಬೀಜಗಳು ನೇರವಾಗಿ ಕೃಷಿಕರಿಂದ-ಕೃಷಿಕರಿಗೆ ತಲಪುವಂತಾಗಿದೆ.ಗದ್ದೆ ಸಮಿತಿಯ ನೇತೃತ್ವದಲ್ಲಿ ರಚಿಸಲಾದ ಆಹಾರ ಸುರಕ್ಷಾ ಗುಂಪು ಭತ್ತ ಸಂಗ್ರಹಿಸಿ, ಅಕ್ಕಿಯಾ ಗಿಸಿ ಮಾರಾಟ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next