ಬೆಂಗಳೂರು: ಸ್ಯಾಂಡಲ್‌ವುಡ್‌ನ ಕೆಲ ಆರೋಪಿಗಳ ಜತೆ ನಂಟು ಹಾಗೂ ನಗರದ ಹಲವಾರು ಡ್ರಗ್ಸ್ ಪೆಡ್ಲರ್ ಗಳಿಗೆ ಕೊಕೈನ್ ಸರಬರಾಜು ಮಾಡುತ್ತಿದ್ದ “ಚೀಫ್’ ಅನ್ನು ಕೇಂದ್ರ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಚೀಫ್ ಅಲಿಯಾಸ್ ಚೆಡಿಬೇರ್ ಅಂಬ್ರೋಸ್(30) ಬಂಧಿತ. ಕಳೆದ 5 ತಿಂಗಳಿಂದ ಸಿಸಿಬಿಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಸ್ಯಾಂಡಲ್‌ವುಡ್‌ನ ಕೆಲ ಆರೋಪಿಗಳು ಸೇರಿ ನಗರದ ಎಲ್ಲಾ ಪೆಡ್ಲರ್‌ಗಳಿಗೆಈತನೇ ಕಿಂಗ್‌ಪಿನ್. ಎಲ್ಲಾ ಆರೋಪಿಗಳುಈತನಿಗೆ ಚೀಫ್ ಎಂದೇ ಕರೆಯುತ್ತಿದ್ದರು. ಹೀಗಾಗಿ ಈತನ ಮೂಲ ಹೆಸರು ಯಾರಿಗೂ ಗೊತ್ತಿಲ್ಲ.
ಆರೋಪಿ ಇತ್ತೀಚೆಗೆ ತನ್ನ ಸಂಪರ್ಕದಲ್ಲಿರುವ ಪೆಡ್ಲ ರ್ ವೊಬ್ಬನ ಭೇಟಿಗೆ ಹೋಗುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಾಣಸವಾಡಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ನೈಜೀರಿಯಾ ಡ್ರಗ್ಸ್‌ಪೆಡ್ಲರ್‌ಗಳ ಜತೆ ಸಂಪರ್ಕ: ಕಳೆದ 5-6 ತಿಂಗಳಲ್ಲಿ ಹತ್ತಾರು ಮಂದಿ ನೈಜೀರಿಯಾ ಸೇರಿ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿತ್ತು. ಆದರೆ, ಪ್ರತಿಯೊಬ್ಬರ ವಿಚಾರಣೆಯಲ್ಲಿಯೂ ತಮ್ಮ ಮೂಲ ಸರಬರಾಜುದಾರ ಚೀಫ್ ಎಂದೇ ಹೇಳುತ್ತಿದ್ದರು. ಹೀಗಾಗಿ ಈತನ ಮೂಲ ಪತ್ತೆಯಾಗಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಬ್ಲಾಕಿ ಎಂಬ ವಿದೇಶಿ ಪೆಡ್ಲರ್‌ವೊಬ್ಬನನ್ನು ಬಂಧಿಸ ಲಾಗಿತ್ತು. ಈತನೂ ತನಗೆ ಚೀಫ್ ಎಂಬಾತ ಡ್ಲಗ್ಸ್ ಪೂರೈಕೆ ಮಾಡುತ್ತಿರುವುದಾಗಿ
ಹೇಳಿದ್ದ. ಬಳಿಕ ಈತನ್ನೇ ತೀವ್ರ ವಿಚಾರಣೆ ನಡೆಸಿದಾಗ ಅಂಬ್ರೋಸ್ ಬಗ್ಗೆ ಕೆಲ ಮಾಹಿತಿ ಬಾಯಿಬಿಟ್ಟಿದ್ದ. ಈ ಹಿನ್ನಲೆಯಲ್ಲಿ ಆರೋಪಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಈತನ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಅಂಬ್ರೋಸ್, ನಗದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಮುಖ್ಯಸ್ಥನಾಗಿದ್ದಾನೆ. ಸಂಪರ್ಕದ ಪೆಡ್ಲರ್‌ಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಸ್ಥಳೀಯ ಪೆಡ್ಲರ್‌ಗ ಳು ಈತನಿಗೆ ಚೀಫ್ ಎಂದು ಕರೆಯುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.