Advertisement

ಕಿಂಗ್‌ ಕೊಹ್ಲಿ ವರ್ಷದ ಐಸಿಸಿ ಟೆಸ್ಟ್‌ , ಒನ್‌ಡೇ ತಂಡದ ನಾಯಕ

06:59 AM Jan 22, 2019 | udayavani editorial |

ದುಬೈ : ಭಾರತೀಯ ಕ್ರಿಕೆಟ್‌ ನಾಯಕ ‘ಕಿಂಗ್‌’ ವಿರಾಟ್‌ ಕೊಹ್ಲಿ, ಐಸಿಸಿ ವಾರ್ಷಿಕ ಪ್ರಶಸ್ತಿಗಳಲ್ಲಿ ಪ್ರಮುಖ ತ್ರಿವಳಿ ಪ್ರಶಸ್ತಿಗಳನ್ನು ಬಾಚಿಕೊಂಡು ಕ್ಲೀನ್‌ ಸ್ವೀಪ್‌ ಸಾಧಿಸಿದ್ದಾರೆ. 

Advertisement

ವಿರಾಟ್‌ ಕೊಹ್ಲಿ  ವರ್ಷದ ಶ್ರೇಷ್ಠ ಟೆಸ್ಟ್‌, ಒನ್‌ಡೇ ಮತ್ತು ಸಮಗ್ರ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದು  ಐಸಿಸಿಯ ಸರ್ವತಾರಾ ವಿಶ್ವ  ಕ್ರಿಕೆಟ್‌ ತಂಡದ ನಾಯಕ ನಾಗಿಯೂ ಪರಿಗಣಿಸಲ್ಪಟ್ಟಿದ್ದಾರೆ. 

ಐಸಿಸಿ ಕ್ರಿಕೆಟರ್‌ ಆಫ್ ದಿ ಇಯರ್‌ ಎಂಬ ಹೆಗ್ಗಳಿಕೆಯ ಸರ್‌ ಗ್ಯಾರ್‌ಫೀಲ್ಡ್‌ ಸೋಬರ್ ಟ್ರೋಫಿಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ಪಡೆದಿದ್ದಾರೆ.

ಅಂತೆಯೇ ನಿರಂತರ ಎರಡನೇ ಬಾರಿಗೆ ಕೊಹ್ಲಿ, ಐಸಿಸಿ ಟೆಸ್ಟ್‌ ಮತ್ತು ಒನ್‌ಡೇ ಪ್ಲೇಯರ್‌ ಆಫ್ ದಿ ಇಯರ್‌ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿದ್ದಾರೆ. ಕೊಹ್ಲಿಗೆ ಇದೆಲ್ಲವೂ ಒದಗಿ ಬಂದಿರುವುದು 2018ರಲ್ಲಿ ಅವರು ತೋರಿರುವ ಅತ್ಯುಜ್ವಲ ನಿರ್ವಹಣೆಗಾಗಿ. 

ಐಸಿಸಿಯ ಈ ಮೂರೂ  ಪ್ರಶಸ್ತಿಗಳನ್ನು  ಏಕ ಕಾಲದಲ್ಲಿ ಗೆದ್ದಿರುವ ಸಾಧನೆಯನ್ನು ಕೊಹ್ಲಿ ಮಾಡಿದ್ದು ಮಾತ್ರವಲ್ಲದೆ ಐಸಿಸಿ ಟೆಸ್ಟ್‌ ಮತ್ತು ಒನ್‌ ಡೇ ಕ್ರಿಕೆಟ್‌ ಟೀಮಿಗೆ ನಾಯಕನೆಂದೂ ಪರಿಗಣಿಸಲ್ಪಟ್ಟಿದ್ದಾರೆ. ಐಸಿಸಿಯ ಈ  ಉಭಯ ತಂಡಗಳಲ್ಲಿ ಅತ್ಯಂತ ಪ್ರತಿಭಾವಂತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಇದ್ದಾರೆ. 

Advertisement

ಅಂದ ಹಾಗೆ ವಿರಾಟ್‌ ಕೊಹ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಐದು ಶತಕಗಳೊಂದಿಗೆ 13 ಟೆಸ್ಟ್‌ ಪಂದ್ಯಗಳಲ್ಲಿ 55.08ರ ಸರಾಸರಿಯಲ್ಲಿ 1.322 ರನ್‌ ಬಾರಿಸಿದ್ದಾರೆ. ಅದೇ ವೇಳೆ 14 ಒನ್‌ಡೇ ಪಂದ್ಯಗಳಲ್ಲಿ 1,202 ರನ್‌ಗಳನ್ನು ಬಾರಿಸಿ 133.55ರ ಸರಾಸರಿಯನ್ನು, ಆರು ಶತಕಗಳ ಸಹಿತವಾಗಿ, ದಾಖಲಿಸಿದ್ದಾರೆ. 10 ಟಿ-20 ಪಂದ್ಯಗಳಲ್ಲಿ ಕೊಹ್ಲಿ 211 ರನ್‌ ಬಾರಿಸಿರುವುದೂ ಗಮನಾರ್ಹವಾಗಿದೆ. 

ಐಸಿಸಿಯ 2018ರ ಟೆಸ್ಟ್‌ ಟೀಮ್‌ ನಲ್ಲಿ ಭಾರತ ಮತ್ತು ನ್ಯೂಜೀಲ್ಯಾಂಡ್‌ನ‌ ತಲಾ ಮೂವರು ಆಟಗಾರರು ಇದ್ದಾರೆ. 2018ರ ಐಸಿಸಿ ಒನ್‌ಡೇ ಟೀಮಿನಲ್ಲಿ ಭಾರತ ಮತ್ತು ಇಂಗ್ಲಂಡ್‌ ನ ತಲಾ ನಾಲ್ವರು ಆಟಗಾರರು ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next