ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2023 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಐಪಿಎಲ್ 2023ಗೆ ಎಲ್ಲಾ ತಯಾರಿಗಳೂ ನಡೆಯುತ್ತಿದ್ದು, ಈ ಕುರಿತು ಶೂಟ್ ಮಾಡಲಾದ ಪ್ರೋಮೋ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಶೇಷವೇನೆಂದ್ರೆ, ಈ ಪ್ರೋಮೋದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ನಟಿಸಿದ್ದು, ಈ ವೀಡಿಯೋ ನೋಡಿ ಕೊಹ್ಲಿ ಫ್ಯಾನ್ಸ್ ಫಿದಾ ಆಗಿದ್ಧಾರೆ.
ಕೆಂಪು ಬಣ್ಣದ ಟೀ-ಶರ್ಟ್ ಧರಿಸಿರುವ ಕೊಹ್ಲಿ ಈ ಪ್ರೋಮೋದಲ್ಲಿ ವಾಲಗ ಊದುವ ದೃಶ್ಯವೂ ಅಭಿಮಾನಿಗಳ ಮನ ಗೆದ್ದಿದೆ. ಈ ವೀಡಿಯೊವನ್ನು ಜೋನ್ಸ್ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ಧಾನೆ.
ಐಪಿಎಲ್ 2023 ಆರಂಭಕ್ಕೆ ಇನ್ನು ಕೇವಲ 16 ದಿನವಷ್ಟೇ ಬಾಕಿಯುಳಿದಿದೆ. ಮೊನ್ನೆಯಷ್ಟೇ ಬಹುಕಾಲದ ಬಳಿಕ ಶತಕ ಬಾರಿಸಿ ಕೊಹ್ಲಿ ಸುದ್ದಿಯಾಗಿದ್ದರು. ಈಗ ಐಪಿಎಲ್ ಪ್ರೋಮೋ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇದೀಗ ಐಪಿಎಲ್ ಅಂಗಳದಲ್ಲಿ, ಆರ್‌ಸಿಬಿ ಜೆರ್ಸಿಯಲ್ಲಿ ಕಿಂಗ್ ಕೊಹ್ಲಿಯನ್ನು ಕಾಣಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಇದನ್ನೂ ಓದಿ:
ಭಾರತೀಯ ಟೆಸ್ಟ್ ಆಟಗಾರರಿಗೆ ಐಪಿಎಲ್ ನಲ್ಲಿ ವಿಶ್ರಾಂತಿ: ಪ್ಲ್ಯಾನ್ ಹೇಳಿದ ರೋಹಿತ್ ಶರ್ಮಾ