Advertisement
ಪುತ್ತೂರು, ಡಿ. 23: ಹತ್ತಾರು ಗ್ರಾಮಗಳಿಗೆ ನೀರೋದಗಿಸಲು ಪೂರಕ ವಾಗಿ ಶಾಂತಿಮೊಗರು ಬಳಿ ಕುಮಾರಧಾರಾ ನದಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪುನರಾರಂಭ ಗೊಂಡಿದ್ದು, ಮುಂದಿನ ಮೇ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
Related Articles
Advertisement
ಹತ್ತಾರು ಪ್ರದೇಶಗಳಿಗೆ ಅನುಕೂಲ :
ಕಿಂಡಿ ಅಣೆಕಟ್ಟೆ ನಿರ್ಮಾಣವಾದರೆ ನದಿ ಪಾತ್ರದ ಎರಡು ಭಾಗದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಬಹು ಗ್ರಾಮದ ಯೋಜನೆ ಅನುಷ್ಠಾನಗೊಳಿಸಿ ಕಡಬ ತಾಲೂಕಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣc ಪ್ಪಾಡಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮ ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.
7.5 ಕೋ.ರೂ. ಯೋಜನೆ :
ಈ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ಕಾಮಗಾರಿ ಶಾಂತಿಮೊಗರು ಹೊಸ ಸೇತುವೆಯ ಸನಿಹದಲ್ಲಿ ನಿರ್ಮಾಣಗೊಳ್ಳುತ್ತಿದೆ. ನದಿ ತಳಮಟ್ಟದಿಂದ 4 ಮೀ. ಎತ್ತರಕ್ಕೆ ನಿರ್ಮಾಣವಾಗುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿರಲಿದೆ. 56 ಕಿಂಡಿಗಳನ್ನು ಒಳಗೊಂಡಿದೆ. ಇದರಲ್ಲಿ 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಡಿಸೆಂಬರ್ ಆರಂಭದಿಂದ ನದಿಯ ನೀರಿನ ಮಟ್ಟವನ್ನು ಗಮನಿಸಿ ಹಲಗೆಗಳನ್ನು ಜೋಡಣೆ ಮಾಡಲಾಗುತ್ತದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ವೇಳೆ ಹಲಗೆಗಳನ್ನು ತೆಗೆದು ನೀರು ಹೊರಬಿಡಲಾಗುತ್ತದೆ. ಮಳೆಗಾಲದಲ್ಲಿ ನದಿಯ ನೀರನ್ನು ಯಾವುದೇ ಅಡೆತಡೆಗಳಿಲ್ಲದೆ ಹರಿಯ ಬಿಡುವುದು ಈ ಕಿಂಡಿ ಅಣೆಕಟ್ಟಿನ ಬಳಕೆ ವಿಧಾನ.
ನೀರಿನ ಹರಿವು ಕಡಿಮೆಯಾಗದ ಕಾರಣ ನಿರೀಕ್ಷಿತ ಅವಧಿಯಲ್ಲಿ ಕಾಮಗಾರಿ ಪೂರ್ಣಕ್ಕೆ ತೊಡಕು ಉಂಟಾಗಿತ್ತು. ಕಾಮಗಾರಿ ಆರಂಭಗೊಂಡಿದ್ದು, 2021 ರ ಮೇ ತಿಂಗಳೊಳಗೆ ಅಣೆಕಟ್ಟು ನಿರ್ಮಾಣ ಪೂರ್ಣಗೊಳ್ಳಲಿದೆ. -ಗೋಕುಲ್‌ದಾಸ್, ಕಾರ್ಯಪಾಲಕ ಅಭಿಯಂತ ಸಣ್ಣ ನೀರಾವರಿ ವಿಭಾಗ, ದ.ಕ.
– ಕಿರಣ್ ಪ್ರಸಾದ್ ಕುಂಡಡ್ಕ