Advertisement
ಬೇಸಗೆ ನಿಧಾನಕ್ಕೆ ಕಾವೇರುತ್ತಿ ರುವಂತೆ ನೀರಿನ ಹರಿವಿನ ಮಟ್ಟ ಇಳಿಮುಖಗೊಂಡು ಕಿಂಡಿ ಅಣೆ ಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸ ಪ್ರಾರಂಭವಾಗುವುದಾದರೂ ಈ ಬಾರಿ ನೀರಿನ ಹರಿವು ಇನ್ನೂ ಇರುವ ಕಾರಣ ಹಲಗೆ ಜೋಡಣೆಯ ಚಿಂತೆ ತಟ್ಟಿಲ್ಲ.
ಡಿಸೆಂಬರ್ ಮೊದಲ ವಾರದಿಂದಲೇ ನೀರಿನ ಹರಿವು ಗಮನಿಸಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಜಲಾನಯನ ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಫಲಾನುಭವಿಗಳೇ ಅದರ ನಿರ್ವಹಣೆ ಮಾಡಬೇಕಿದೆ. ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಸಹಭಾಗಿತ್ವ ಮೂಲಕ ನಿರ್ಮಾಣವಾಗುವ ಕಿಂಡಿ ಅಣೆಕಟ್ಟಿನಲ್ಲಿ 5 ವರ್ಷದ ಅನಂತರ ಸಣ್ಣ ಪುಟ್ಟ ದುರಸ್ತಿ ಗಷ್ಟೆ ಅನುದಾನ ನೀಡಲಾಗುತ್ತದೆ. ಹಲಗೆ ಹಾಕುವ ಮತ್ತು ತೆಗೆಯುವ ಕೆಲಸ ವನ್ನು ಕಿಂಡಿ ಅಣೆಕಟ್ಟು ವ್ಯಾಪ್ತಿಯ ಫಲಾ ನು ಭವಿಗಳೇ ಮಾಡಬೇಕು. ಇದಕ್ಕೆ ಪ್ರತ್ಯೇಕ ವಾಗಿ ಅನುದಾನ ಲಭ್ಯ ವಾಗುವುದಿಲ್ಲ. ಹರಿವು ಪ್ರಮಾಣ ಹೆಚ್ಚಳ
ಕಳೆದ ಕೆಲವು ವರ್ಷಗಳಿಗೆ ಹೋಲಿಸಿ ದರೆ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬತ್ತಿದ್ದ ಹೊಳೆ, ನದಿಯಲ್ಲಿ ಈ ಬಾರಿ ನೀರಿನ ಹರಿವು ಹೆಚ್ಚಾಗಿದೆ. ನೀರಿನ ಹರಿವು ನಿಲ್ಲುವ ಸಮಯದಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ ಬೇಸಗೆ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಳಸಲಾಗುತ್ತದೆ. ಈ ಬಾರಿ ಆ ಅಗತ್ಯ ಕೊಂಚ ವಿಳಂಬವಾಗಿ ಎದುರಾಗ ಬಹುದು ಎನ್ನುತ್ತಿದೆ ಸದ್ಯದ ಚಿತ್ರಣ.
Related Articles
Advertisement
200ಕ್ಕೂ ಅಧಿಕ ಕಿಂಡಿ ಅಣೆಕಟ್ಟುಸುಳ್ಯ, ಪುತ್ತೂರು ತಾಲೂಕಿನಲ್ಲಿ 200ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಇದು ಜಲ ಸಂರಕ್ಷಣೆ ಜತೆಗೆ ಕೃಷಿ ತೋಟಗಳಿಗೆ ನೀರೊದಗಿಸಲು ಸಹಕಾರಿಯಾಗಿದೆ. ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಮೂಲಕ ಕೂಡ ಕಿಂಡಿ ಅಣೆಕಟ್ಟುಗಳು ಹಲವೆಡೆ ನಿರ್ಮಾಣಗೊಂಡಿವೆ.