Advertisement
ಆಜ್ರಿ ಗ್ರಾಮದ ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದವರು ಸೇತುವೆ ಯಿಲ್ಲದೆ ಮಳೆಗಾಲದಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. 1 ಕಿ.ಮೀ. ಸಂಚರಿಸಬೇಕಾದ ಗ್ರಾಮಸ್ಥರು ಮಳೆಗಾಲದಲ್ಲಿ ಸೇತುವೆಯಿಲ್ಲದೆ 5 ಕಿ.ಮೀ. ಹೆಚ್ಚುವರಿಯಾಗಿ ಸಂಚರಿಸುವ ಸ್ಥಿತಿ ಇಲ್ಲಿಯರದಾಗಿದೆ.
ಜಡ್ಡಿನಮೂಲೆಯಲ್ಲಿ ಸೇತುವೆ ಯಾದರೆ ಬಡಬಾಳು, ಯಡೂರು, ಯಡ್ನಾಡಿ, ತೆಂಕಬೈಲು, ಜಡ್ಡಿನಮೂಲೆ, ಜಿಗಿನ್‌ಗುಂಡಿ, ಕಂಪದಕೆರೆ, ಕೇವರ್ಜಿ, ಕ್ಯಾಕೋಡು, ತೆಂಕಬೈಲು ಈ ಎಲ್ಲ ಊರಿಗೆ ಒಂದು ಕಡೆಯಿಂದ ಆಜ್ರಿ, ಸಿದ್ದಾಪುರ ಕಡೆಗೆ, ಮತ್ತೂಂದು ಕಡೆಯಿಂದ ಶಂಕರನಾರಾಯಣ, ಸಿದ್ದಾಪುರ, ಕುಂದಾಪುರಕ್ಕೆ ಸಂಚರಿಸಲು ಪ್ರಯೋಜನ ವಾಗಲಿದೆ. ಇದಲ್ಲದೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗುವುದರಿಂದ ಈ ಭಾಗದ ಹತ್ತಾರು ಎಕರೆ ಕೃಷಿ ಪ್ರದೇಶಗಳಿಗೂ ಅನುಕೂಲವಾಗಲಿದೆ. ಮಾತ್ರವಲ್ಲದೆ ಈ ಪ್ರದೇಶದ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಏರಿಕೆಗೂ ಪ್ರಯೋಜನವಾಗಲಿದೆ.
Related Articles
ಇಲ್ಲಿನ ಗ್ರಾಮಸ್ಥರು ಜಡ್ಡಿನಮೂಲೆಯಲ್ಲಿ ಸೇತುವೆ ಅಗತ್ಯ ಎಂದು ಬಹಳಷ್ಟು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಲೇ ಬಂದಿದ್ದರು. ನಾನು ಚುನಾವಣಾ ಪ್ರಚಾರ ಸಂದರ್ಭ ಗೆದ್ದು ಬಂದರೆ ಸೇತುವೆಗೆ ಅನುದಾನ ತರುತ್ತೇನೆಂದು ಮಾತು ಕೊಟ್ಟಿದ್ದೆ. ಅದರಂತೆ ಈಗ ನಡೆದುಕೊಂಡಿದ್ದು, ಸೇತುವೆ ಸಹಿತ, ಈ ಭಾಗದ ಕೃಷಿ ಭಾಗಕ್ಕೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಕೂಡ ನಿರ್ಮಾಣವಾಗಲಿದೆ.
Advertisement
ಸಣ್ಣ ನೀರಾವರಿ ಇಲಾಖೆಯಿಂದ 3.5 ಕೋ.ರೂ. ಅನುದಾನ ಮಂಜೂರಾಗಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು.-ಬಿ.ಎಂ. ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು ಸುದಿನ ವರದಿ
ಜಡ್ಡಿನಮೂಲೆಯಲ್ಲಿ ಸೇತುವೆ ಬೇಡಿಕೆ ಕುರಿತಂತೆ ಫೆ.16 ರಂದು “ಉದಯವಾಣಿ ಸುದಿನ’ ಮುಖಪುಟದಲ್ಲಿ “ಕಾಲು ಸಂಕದ ಸಂಕಷ್ಟದ ನಡಿಗೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ ‘ಎನ್ನುವ ವಿಶೇಷ ವರದಿ ಪ್ರಕಟಿಸಿತ್ತು.