Advertisement

ಶಿಶುವಿಹಾರ/ ಡೇ ಕೇರ್‌

04:30 AM Jul 06, 2020 | Lakshmi GovindaRaj |

ಭಾರತದ ಕುಟುಂಬ ವ್ಯವಸ್ಥೆ ಹಿಂದಿನಂತಿಲ್ಲ. ಕೂಡು ಕುಟುಂಬಗಳೆಲ್ಲವೂ ಈಗ ತುಂಡುಗಳಾಗಿ ನ್ಯೂಕ್ಲಿಯರ್‌ ಕುಟುಂಬಗಳಾಗಿವೆ. ಮಗ- ಸೊಸೆ ಇಬ್ಬರೂ ಕೆಲಸಕ್ಕೆ ಹೋಗುತ್ತಿರುವ ಇಂದಿನ ಕಾಲದಲ್ಲಿ, ಮಕ್ಕಳನ್ನು ನೋಡಿಕೊಳ್ಳುವುದೂ ಸಮಸ್ಯೆಯಾಗಿ  ಪರಿಣಮಿಸುತ್ತಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಇತರೆಡೆಗಳಲ್ಲಿಯೂ ಶಿಶುವಿಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ.

Advertisement

ನಗರ ಪ್ರದೇಶಗಳಲ್ಲಿ ಅದು ಅಗತ್ಯವಾಗಿಬಿಟ್ಟಿದೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು  ಇಚ್ಛಿಸುವವರು ಅದನ್ನೇ ಉದ್ಯಮವಾಗಿ ಬೆಳೆಸಬಹುದು. ಎಳೆಯ ಮಕ್ಕಳಿಗೆ ಕ್ರಿಯಾಶೀಲ ಚಟುವಟಿಕೆಗಳು, ಆಟಿಕೆಗಳು ಮತ್ತಿತರ  ಸ್ತುಗಳನ್ನು ಇಟ್ಟುಕೊಂಡು ಆಟದ ಜೊತೆ ಪಾಠವನ್ನೂ ಕಲಿಸಿದಂತಾಗುವುದು. ಇದರಿಂದಾಗಿ ಕಲಿಕೆಯ  ಕೇಂದ್ರವಾಗಿಯೂ ಡೇ ಕೇರ್‌ ಸೆಂಟರ್‌ ಜನಪ್ರಿಯತೆ ಗಳಿಸುವುದು.

ಮಕ್ಕಳನ್ನು ನೋಡಿಕೊಳ್ಳುವುದು ಜವಾಬ್ದಾರಿಯೂ ಹೌದು. ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಅನುಸರಿಸಬೇಕು. ಪಾಲಕರಿಗೆ ಅದನ್ನೆಲ್ಲ  ಕಂಡರೆ ಸಹಜವಾಗಿಯೇ ಖುಷಿಯಾಗುತ್ತದೆ. ನಂತರ ಬಾಯಿಂದ ಬಾಯಿಗೆ ವಿಷಯ ಹರಡಿ, ಮಕ್ಕಳ ದಾಖಲಾತಿಯೂ ಹೆಚ್ಚಳಗೊಳ್ಳುವುದು.

Advertisement

Udayavani is now on Telegram. Click here to join our channel and stay updated with the latest news.

Next