Advertisement

ಭಾರತ “ಎ’ತಂಡದಲ್ಲಿ ಕೃಣಾಲ್‌, ಥಂಪಿ

03:35 AM Jun 30, 2017 | Team Udayavani |

ಹೊಸದಿಲ್ಲಿ: ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ಮಿಂಚಿದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಮತ್ತು ಮಧ್ಯಮ ವೇಗಿ ಬಾಸಿಲ್‌ ಥಂಪಿ ಮೊದಲ ಬಾರಿಗೆ ಭಾರತ “ಎ’ ತಂಡದಲ್ಲಿ ಆಡುವ ಅವಕಾಶ ಸಂಪಾದಿಸಿದ್ದಾರೆ. ಮುಂದಿನ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಆರಿಸಲಾದ ತಂಡದಲ್ಲಿ ಇವರಿಬ್ಬರೂ ಸ್ಥಾನ ಸಂಪಾದಿಸಿದ್ದಾರೆ.

Advertisement

ಈ ಪ್ರವಾಸದ ವೇಳೆ ಆಸ್ಟ್ರೇಲಿಯವನ್ನೊಳಗೊಂಡ ಏಕದಿನ ತ್ರಿಕೋನ ಸರಣಿ ಹಾಗೂ ಚತುರ್ದಿನ ಪಂದ್ಯಗಳ ಸರಣಿ ನಡೆಯಲಿದೆ. ಇವೆರಡಕ್ಕೂ ಪ್ರತ್ಯೇಕ ತಂಡಗಳನ್ನು ಆರಿಸಲಾಗಿದ್ದು, ಎರಡಕ್ಕೂ ಕರ್ನಾಟಕದ ಕ್ರಿಕೆಟಿಗರೇ ನಾಯಕರಾಗಿರುವುದು ವಿಶೇಷ. ಇವರೆಂದರೆ ಮನೀಷ್‌ ಪಾಂಡೆ ಮತ್ತು ಕರುಣ್‌ ನಾಯರ್‌. ಸ್ನಾಯು ಸೆಳೆತದಿಂದ ವಿಶ್ರಾಂತಿಯಲ್ಲಿದ್ದ ಪಾಂಡೆ ಈಗ ಚೇತರಿಸಿಕೊಂಡಿದ್ದಾರೆ.

ಈಗಾಗಲೇ ಟೀಮ್‌ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಹಾರ್ದಿಕ್‌ ಪಾಂಡ್ಯ ಅವರ ಸಹೋದರನಾಗಿರುವ 26ರ ಹರೆಯದ ಕೃಣಾಲ್‌ ಪಾಂಡ್ಯ ರಣಜಿಯಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುತ್ತಾರೆ. ಎಡಗೈ ಬ್ಯಾಟಿಂಗ್‌ ಹಾಗೂ ಎಡಗೈ ಆಫ್ ಸ್ಪಿನ್‌ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸದಸ್ಯ. 2017ರ ಐಪಿಎಲ್‌ ಋತುವಿನಲ್ಲಿ 243 ರನ್‌ ಜತೆ 10 ವಿಕೆಟ್‌ ಹಾರಿಸಿದ ಸಾಧನೆ ಪಾಂಡ್ಯ ಅವರದು.

ಕೇರಳದ ಕ್ರಿಕೆಟ್‌ ಪ್ರತಿಭೆ
ಕೇರಳದ ಎರ್ನಾಕುಳಂನವರಾದ ಬಾಸಿಲ್‌ ಥಂಪಿ ಮೊದಲ ಸಲ ಐಪಿಎಲ್‌ ಋತುವಿನಲ್ಲೇ 11 ವಿಕೆಟ್‌ ಹಾರಿಸಿ, ಗುಜರಾತ್‌ ಲಯನ್ಸ್‌ ಬೌಲಿಂಗ್‌ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದರು. ಪರಿಣಾಮಕಾರಿ ಯಾರ್ಕರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬುಗೊಳಿಸಿದ್ದರು.

ಬ್ಯಾಟ್ಸ್‌ಮನ್‌ಗಳಾದ ಹನುಮ ವಿಹಾರಿ, ಸುದೀಪ್‌ ಚಟರ್ಜಿ; ಸೀಮರ್‌ಗಳಾದ ಅಂಕಿತ್‌ ರಜಪೂತ್‌, ಮೊಹಮ್ಮದ್‌ ಸಿರಾಜ್‌ ಕೂಡ ಇದೇ ಮೊದಲ ಸಲ ಭಾರತ “ಎ’ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆಂಧ್ರದ ವಿಹಾರಿ 2016-17ರ ರಣಜಿ ಸಾಲಿನಲ್ಲಿ ಒಂದು ದ್ವಿಶತಕ ಸಹಿತ 688 ರನ್‌ ಬಾರಿಸಿದರೆ, ಸಿರಾಜ್‌ ಹೈದರಾಬಾದ್‌ ಪರ ಸರ್ವಾಧಿಕ 41 ವಿಕೆಟ್‌ ಹಾರಿಸಿದ್ದರು.

Advertisement

ಜು. 26ರಂದು ತ್ರಿಕೋನ ಸರಣಿ ಮೊದಲ್ಗೊಳ್ಳಲಿದೆ. ಆಗಸ್ಟ್‌ನಲ್ಲಿ 2 ಚತುರ್ದಿನ ಪಂದ್ಯಗಳು ನಡೆಯಲಿವೆ. ಸ್ಥಳ: ಬೆನೋನಿ ಮತ್ತು ಪೊಚೆಫ್ಸೂಮ್‌.

ಭಾರತ ತಂಡಗಳು
ತ್ರಿಕೋನ ಸರಣಿ: ಮನೀಷ್‌ ಪಾಂಡೆ (ನಾಯಕ), ಮನ್‌ದೀಪ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ಕರುಣ್‌ ನಾಯರ್‌, ಕೃಣಾಲ್‌ ಪಾಂಡ್ಯ, ರಿಷಬ್‌ ಪಂತ್‌ (ವಿ.ಕೀ.), ವಿಜಯ್‌ ಶಂಕರ್‌, ಅಕ್ಷರ್‌ ಪಟೇಲ್‌, ಯಜ್ವೇಂದ್ರ ಚಾಹಲ್‌, ಜಯಂತ್‌ ಯಾದವ್‌, ಬಾಸಿಲ್‌ ಥಂಪಿ, ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಸಿದ್ಧಾರ್ಥ ಕೌಲ್‌.

ಚತುರ್ದಿನ ಪಂದ್ಯ: ಕರುಣ್‌ ನಾಯರ್‌ (ನಾಯಕ), ಪ್ರಿಯಾಂಕ್‌ ಪಾಂಚಾಲ್‌, ಅಭಿನವ್‌ ಮುಕುಂದ್‌, ಶ್ರೇಯಸ್‌ ಅಯ್ಯರ್‌, ಅಂಕಿತ್‌ ಬವೆ°, ಸುದೀಪ್‌ ಚಟರ್ಜಿ, ಇಶಾನ್‌ ಕಿಶನ್‌ (ವಿ.ಕೀ.), ಹನುಮ ವಿಹಾರಿ, ಜಯಂತ್‌ ಯಾದವ್‌, ಶಾಬಾಜ್‌ ನದೀಂ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಅನಿಕೇತ್‌ ಚೌಧರಿ, ಅಂಕಿತ್‌ ರಜಪೂತ್‌.

Advertisement

Udayavani is now on Telegram. Click here to join our channel and stay updated with the latest news.

Next