ಶಿವಮೊಗ್ಗ : ಚೈತ್ರ ಕುಂದಾಪುರ ಅವರು ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಕೆಡಿಸ್ತಾರೆ. ಅವರ ವ್ಯಕ್ತಿಗತ ಆರೋಪ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರು ಅಕ್ರಮದಲ್ಲಿ ಭಾಗಿ ಆಗಿದ್ದರೆ ಕ್ರಮ ಆಗಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸಚಿವ ಡಿ ಸುಧಾಕರ ವಿರುದ್ಧ ದೂರು ವಿಚಾರದಲ್ಲಿ ಈಗಾಗಲೇ ಸಿಎಂ, ಡಿಸಿ ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದರು.
ಕರಿಮನೆ ಗ್ರಾಪಂನಲ್ಲಿ ಅಕ್ರಮ ಕಡಿತಲೆ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಅವರು, ಅಕೇಶಿಯ ಬೆಳೆಸಿದ್ದು, ಕಡಿತಲೆ ಮಾಡುತ್ತಿರುವುದು ಗ್ರಾಪಂ. ಕಡಿತಲೆ ಮಾಡಲು ಆರಗ ಪತ್ರ ಕೊಟ್ಟಿದ್ದಾರೆ. ಟೆಂಡರ್ ಹಿಡಿದವರು, ದೂರು ಕೊಟ್ಟವರು ಎರಡೂ ಬಿಜೆಪಿಯವರೇ. ಆರಗ ಅವರಿಗೆ ಒಂದು ಸಮಸ್ಯೆಯಿದೆ ಪಕ್ಷದ ಕಾರ್ಯಕರ್ತರು ಹೇಳಿದ್ದೆಲ್ಲ ನಂಬುತ್ತಾರೆ. ಕೋಣ ಕರು ಹಾಕಿದೆ ಅಂದ್ರೂ ಹೌದು ಅಂತಾರೆ. ಅಕ್ರಮ ಆಗಿದ್ದರೆ ಆರಗ ಪತ್ರ ಕೊಟ್ಟಿದ್ದು ತಪ್ಪಲ್ಲವೇ? ದಲಿತ ಪಿಡಿಒ ಮೇಲೆ ಕಿರುಕುಳ ಕೊಟ್ಟ ಆರಗ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕರಿಮನೆ ಗ್ರಾ.ಪಂ ನಲ್ಲಿ ಅನುದಾನ ಬಂದಿದ್ದು ನನ್ನ ಅವಧಿಯಲ್ಲಿ. ತೀರ್ಥಹಳ್ಳಿಯಲ್ಲಿ ಬಿಜೆಪಿಯವರು 10 ಸಾವಿರ ಸೀರೆ ಹಂಚಿದ್ದು ಯಾಕೆ? ಬಾಗಿನ ಕೊಡ್ತೀವಿ ಅಂತ ಕರೆದಿದ್ದಾರೆ. ಕಳೆದ ವರ್ಷ ಬೆಳ್ಳಿ ನಾಣ್ಯ ಕೊಟ್ಟಿದ್ದರು, ಈ ಬಾರಿ ಚಿನ್ನದ ನಾಣ್ಯ ಕೊಡ್ತಾರಂತ ಹೆಚ್ಚು ಜನ ಸೇರಿದ್ದರು. ಸೀರೆಗಾಗಿ ಹೊಡೆದಾಟ ಆಗಿ ಕೆಲವರು ಆಸ್ಪತ್ರೆ ಸೇರಿದ್ದರು. ನಾನು ಯಾವತ್ತೂ ಕಾನೂನು ಬಾಹಿರಕ್ಕೆ ಸಪೋರ್ಟ್ ಮಾಡುತ್ತಿಲ್ಲ. ಆರಗ ಅವರಿಗೆ ಕಾರ್ಯಕರ್ತರು ಹೇಳಿದ್ದೇ ವೇದವಾಕ್ಯ. ದಲಿತರ ಮೇಲೆ ಕೇಸ್ ಹಾಕುತ್ತಾರೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಹಲ್ಲೆ ಮಾಡಿಸ್ತಾರೆ. ವೇದಿಕೆಯಲ್ಲಿ ಒಂದು ಮಾತಾಡ್ತಾರೆ, ಕೆಳಗಿಳಿದ ಮೇಲೆ ಇನ್ನೊಂದು ಎಂದು ಹರಿಹಾಯ್ದರು.
ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ. ಪಕ್ಷಕ್ಕಾಗಿ ತ್ಯಾಗ ಮಾಡಬೇಕು. ನಾನು ಕೂಡ ಇನ್ನೊಬ್ಬರಿಗೆ ಅವಕಾಶ ಸಿಗಲಿ ಅಂತ ರಾಜೀನಾಮೆ ಕೊಟ್ಟೆ ಎಂದರು.
ಹಳೆ ಕುಡಿಕೆ ತುಪ್ಪ ಹೀರುವುದಿಲ್ಲ. ಬಿಜೆಪಿಯವರದ್ದು ಹೊಸ ಕುಡಿಕೆ. ಹೀಗಾಗಿ ಹೆಚ್ಚು ಹೀರುತ್ತಿದ್ದಾರೆ. ಒಂದು ಕುಟುಂಬದ ಸಮಸ್ಯೆ ಬಗೆಹರಿಸುವುದೇ ಕಷ್ಟ ಅಂತಹದ್ದರಲ್ಲಿ 50 ಸಾ.ಕೋಟಿ ಯೋಜನೆ ತಕ್ಷಣ ಆಗಬೇಕೆಂದರೆ ಈ ದೇಶದಲ್ಲಿ ಬೆಂಕಿ ಹತ್ತಿದ್ದು ಬಿಜೆಪಿಯಿಂದ ಮಾತ್ರ. ಅಭಿವೃದ್ಧಿ ಬೇಕಾಗಿಲ್ಲ, ಕೇವಲ ಜಾತಿ ಧರ್ಮದ ವಿಷಯ ಬೇಕು ಇವರಿಗೆ ಗ್ಯಾರಂಟಿ ಯೋಜನೆ ಒಂದು ಹಂತಕ್ಕೆ ಬರಲು ಸಮಯ ಬೇಕು ಗಡಿಬಿಡಿ ಯಾಕೆ? ತಾಂತ್ರಿಕ ಸಮಸ್ಯೆಗಳಿವೆ, ಅದಕ್ಕೆ ಪ್ರತಿಭಟನೆ ಬೇಕೆ? ಎಂದು ಪ್ರಶ್ನಿಸಿದರು.
ಮಳೆ ಕಡಿಮೆ ಆಗಿರುವುದರಿಂದ ಎಲ್ಲ ಕಡೆ ಹಾಹಾಕಾರ ಇದೆ. ಜನ, ಸರ್ಕಾರ ಕೂಡ ಸಹಕರಿಸಬೇಕು. ಕಾವೇರಿ ವಿವಾದ ವಿಚಾರದಲ್ಲಿ ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಏನಾಗುವುದಿಲ್ಲ. ಅಧಿಕಾರಿಗಳು ಒಳಗೆ ಹೋಗುತ್ತಾರೆ. ಕಾನೂನಾತ್ಮಕವಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರಿಂದ ನಷ್ಟ ಜೆಡಿ ಎಸ್ ಗೆ ಬಿಜೆಪಿ ಸೇರಿಕೊಳ್ಳುವವರಿಗೆ, ಅವರ ಪಾರ್ಟಿಗೆ ನಷ್ಟ. ಬಂಗಾರಪ್ಪ ಬಿಜೆಪಿ ಸೇರಿದ್ದರಿಂದ ಬಿಜೆಪಿಗೆ ಲಾಭ ಆಯ್ತುಬಂಗಾರಪ್ಪ ಅವರಿಗೆ ನಷ್ಟ ಆಯಿತು ಎಂದರು.