Advertisement

North Korea: ರೈಲಲ್ಲೇ ಕಿಮ್‌ ವಿದೇಶ ಭೇಟಿ!

11:45 PM Sep 12, 2023 | Team Udayavani |

ಸಾಮಾನ್ಯವಾಗಿ ಎಲ್ಲಾ ದೇಶಗಳ ಸರ್ಕಾರಿ ಮುಖ್ಯಸ್ಥರು ವಿಮಾನದಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಆದರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ರೈಲಿನಲ್ಲಿ ರಷ್ಯಾಗೆ ಆಗಮಿಸಿದ್ದಾರೆ. ಅವರು ಪ್ರಯಾಣಿಸಿದ ರೈಲಿನ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

Advertisement

ರೈಲಿನ ವಿಶೇಷತೆಗಳೇನು?
– ಎಲ್ಲ 90 ಬೋಗಿಗಳಿಗೂ ಗುಂಡು ನಿರೋಧಕ ವ್ಯವಸ್ಥೆ. ಯಾವುದೇ ರೀತಿಯ ಸ್ಫೋಟವನ್ನು ತಾಳಿಕೊಳ್ಳುವ ಸಾಮರ್ಥ್ಯ.
– ತುರ್ತು ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್‌ ಮೂಲಕ ಪಾರಾಗಲೂ ದಾರಿ ಇದೆ.
– ಫ್ರೆಂಚ್‌ ವೈನ್‌ ಹೊಂದಿರುವ ಒಂದು ವಿಶೇಷ ರೆಸ್ಟಾರೆಂಟ್‌ ಇದರೊಳಗಿದೆ.
– ಸ್ಯಾಟಲೈಟ್‌ ಫೋನ್‌ ಸಂಪರ್ಕ, ಕಾನ್ಫರೆನ್ಸ್‌ ರೂಮ್‌, ಬೆಡ್‌ರೂಮ್‌ಗಳನ್ನು ಹೊಂದಿದೆ.

1,180 ಕಿಮೀ- ಪ್ರಯಾಣಿಸಿದ ದೂರ
20 ಗಂಟೆ- ಪ್ರಯಾಣದ ಅವಧಿ
50 ಕಿಮೀ- ಪ್ರತಿ ಗಂಟೆಗೆ ರೈಲಿನ ವೇಗ
90 – ರೈಲಿನಲ್ಲಿರುವ ಬೋಗಿಗಳು

ರಷ್ಯಾಗೆ ಶಸ್ತ್ರಾಸ್ತ್ರ ಕೊಡುಗೆ?
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕಿಮ್‌ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ತಮ್ಮ ವೈಭವೋಪೇತ ರೈಲಿನಲ್ಲೇ ಉ.ಕೊರಿಯಾದಿಂದ ರಷ್ಯಾಗೆ ಸಂಚರಿಸಿದ್ದಾರೆ. ದೂರದ ಸ್ಥಳಕ್ಕೆ ರೈಲಿನಲ್ಲಿ ತೆರಳುವ ಪದ್ಧತಿ ಶುರು ಮಾಡಿದ್ದು ಕಿಮ್‌ ಜಾಂಗ್‌ ಉನ್‌ ಅವರ ತಾತ. ಅವರನ್ನೇ ಕಿಮ್‌ ಕೂಡ ಅನುಸರಿಸಿದ್ದಾರೆ. ರಷ್ಯಾದಲ್ಲಿ ಕಿಮ್‌ ಅವರು ಪುಟಿನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಉಕ್ರೇನ್‌ ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಪೂರೈಸುವ ಕುರಿತು, ಅದಕ್ಕೆ ಪ್ರತಿಯಾಗಿ ರಷ್ಯಾದಿಂದ ಆರ್ಥಿಕ ನೆರವು ಮತ್ತು ಸೇನಾ ತಂತ್ರಜ್ಞಾನ ವಿನಿಮಯ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next