Advertisement

ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ…

09:59 AM Aug 01, 2018 | Harsha Rao |

ಟೊರಂಟೋ: ನಿಮ್ಮ ದೇಶಕ್ಕೆ ಈ ಕೂಡಲೇ ಹೊರಟು ಹೋಗಿ, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ…
ಇದು ಕೆನಡಾದಲ್ಲಿನ ಟ್ರಕ್‌ ಡ್ರೈವರ್‌ವೊಬ್ಬ ಭಾರತೀಯ ಮೂಲದ ದಂಪತಿ ವಿರುದ್ಧ ಜನಾಂಗೀಯ ನಿಂದನೆ ನಡೆಸಿದ ಬಗೆ. ಇಷ್ಟೇ ಅಲ್ಲ, ಪಾರ್ಕಿಂಗ್‌ ವಿಚಾರದಲ್ಲಿ ಈ ಜಗಳ ಶುರುವಾಗಿದ್ದು, ಪೊಲೀಸರಿಗೆ ದೂರನ್ನೂ ನೀಡಲಾಗಿದೆ. ಈ ಚಾಲಕನನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣವನ್ನೂ ದಾಖಲಿಸಲಾಗಿದೆ.

Advertisement

ಇದು ನಡೆದಿರುವುದು ಕೆನಡಾದ ಹ್ಯಾಮಿಲ್ಟನ್‌ನಲ್ಲಿ. ಈ ಪ್ರದೇಶ ಜನಾಂಗೀಯ ನಿಂದನೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ. ಈ ಪ್ರಕರಣದಲ್ಲೂ ಡ್ರೈವರ್‌ ನಿಂದನೆ ಮಾಡಿದ್ದಲ್ಲದೇ, ಮಹಿಳೆ ಮೇಲೆ ಲಾರಿ ಹತ್ತಿಸಲೂ ನೋಡಿದ್ದಾನೆ. ನೀವು ಈ ದೇಶ ಬಿಟ್ಟು ಹೋಗಿ ಎಂದು ಹೇಳಿ, ಮುಂದೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next