Advertisement

ಕೀಳಿಂಜೆ ಮದ್ಮಲ್‌ ಕೆರೆ: 2 ಶಿಲಾಶಾಸನ ಪತ್ತೆ

08:56 AM Mar 31, 2017 | |

ಉಡುಪಿ: ಹಾವಂಜೆ ಕೀಳಿಂಜೆಯ ಬಳಿ ಮದ್ಮಲ್‌ ಕೆರೆಗೆ ಗುದ್ದಲಿ ಪೂಜೆ ನಡೆದ ಬಳಿಕ ಜೆ.ಸಿ.ಬಿ. ಬರಲು ಕೃತಕ ದಾರಿ ಮಾಡುತ್ತಿರುವಾಗ ಕೆರೆಯ ಪಕ್ಕದಲ್ಲಿ ಹಳೆಯ ಎರಡು ಶಿಲಾಶಾಸನ ಪತ್ತೆಯಾಗಿವೆ. 

Advertisement

ಒಂದು ಶಾಸನ ಕಾಂಗ್ರೆಸ್‌ ಮುಖಂಡ ಜಯ ಶೆಟ್ಟಿ ಬನ್ನಂಜೆಯವರ ತಾಯಿಯ ಜಮೀನಿನಲ್ಲಿದೆ. ಇದರ ಮುಕ್ಕಾಲು ಅಂಶ ಮಣ್ಣಿನಲ್ಲಿ ಹೂತು ಹೋಗಿದೆ. ಹಿರಿಯರು ಇದನ್ನು ರಾಮ ಲಕ್ಷ್ಮಣ ಕಲ್ಲು ಎಂದು ಬಣ್ಣಿಸುತ್ತಾರೆ.  ಸ್ವಲ್ಪ ಭಾಗವನ್ನು ಸ್ಥಳೀಯ ಶೇಖರ್‌ ಪೂಜಾರಿ ಅಟ್ಟಿಲ್‌ ಸ್ವತ್ಛಗೊಳಿಸಿದಾಗ ಅದರಲ್ಲಿ ಒಬ್ಬ ಮನುಷ್ಯ ಹಾಗೂ ಸೂರ್ಯ ಚಂದ್ರ ಸಂಪೂರ್ಣವಾಗಿ ಗೋಚರಿಸಿತು. ಪಕ್ಕದಲ್ಲಿ ನಾಗದೇವರ ಹುತ್ತಗಳು ಕಾಣಸಿಗುತ್ತವೆ. ಅದೇ ರೀತಿ ಮದ್ಮಲ್‌ ಕೆರೆಯ ಪೂರ್ವದ ಮಗ್ಗುಲಲ್ಲಿ ಇನ್ನೊಂದು ಸ್ತಂಭದ ತರ ಇರುವ, ಬರಹವಿರುವ ಬಿಳಿ ಕಲ್ಲಿನ ಚೌಕಾಕೃತಿಯ ಶಿಲಾಶಾಸನ ಉಳುಮೆ ಮಾಡುವ ಕೊರಗ ಆಚಾರ್ಯರ ಗದ್ದೆಯಲ್ಲಿ ಪತ್ತೆಯಾಗಿದೆ. 

ಇತಿಹಾಸ ತಜ್ಞ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ|ಬಿ.ಜಗದೀಶ ಶೆಟ್ಟಿಯವರು ಚಿತ್ರವನ್ನು ನೋಡಿ ವಿಜಯನಗರ ಸಾಮ್ರಾಜ್ಯ ಕಾಲದ ಶಾಸನ ಇದಾಗಿರಬಹುದು. ಸ್ಥಳ ಪರಿಶೀಲನೆ ಬಳಿಕ ನಿಖರವಾಗಿ ಹೇಳಬಹುದು ಎಂದಿರುವುದಾಗಿ ಗಣೇಶ್‌ರಾಜ್‌ ಸರಳೇಬೆಟ್ಟು ತಿಳಿಸಿದ್ದಾರೆ.

 ತಾಯಿಗೆ ಸೇರಿದ ಜಮೀನಿನಲ್ಲಿ ಇಂತಹ ಪಾರಂಪರಿಕ ಶಿಲಾಶಾಸನ ಸಿಕ್ಕಿರುವುದರಿಂದ ಸಂತಸವಾಗಿದೆ. ಅದನ್ನು ರಕ್ಷಣೆ ಮಾಡಿ ಸೂಕ್ತ ಕಾಯಕಲ್ಪದ ಜವಾಬ್ದಾರಿಯನ್ನು ತಾವೇ ಮಾಡುತ್ತೇವೆ ಹಾಗೂ ಸಂಶೋಧಕರಿಗೆ ಸಂಶೋಧಿಸಲು ಅವಕಾಶ ಮಾಡಿ
ಕೊಡುತ್ತೇವೆ ಎಂದು ಜಯ ಶೆಟ್ಟಿ ತಿಳಿಸಿ ದ್ದಾರೆ. ಈ ಸಂದರ್ಭದಲ್ಲಿ ಜಯಶೆಟ್ಟಿ ಬನ್ನಂಜೆ, ವಾಲ್ಟರ್‌ ಡಿ’ಸೋಜಾ, ಶೇಖರ್‌ ಪೂಜಾರಿ ಅಟ್ಟಿಲ್‌, ಮುಕ್ಕಾಲಿ ಸುಂದರ ಶೆಟ್ಟಿ, ಗಣೇಶ್‌ ಶೆಟ್ಟಿ ಕೀಳಿಂಜೆ ಜತೆಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next