Advertisement

ಸೇಂಟ್‌ ಪೀಟರ್ಬರ್ಗ್‌ ಟೆನಿಸ್‌: ಕಿಕಿ ಬರ್ಟೆನ್ಸ್‌ ಚಾಂಪಿಯನ್‌

12:30 AM Feb 05, 2019 | Team Udayavani |

ಸೇಂಟ್‌ ಪೀಟರ್ಬರ್ಗ್‌:  “ಸೇಂಟ್‌ ಪೀಟರ್ಬರ್ಗ್‌ ಟೆನಿಸ್‌’ ಕೂಟದ ಫೈನಲ್‌ನಲ್ಲಿ ಬೆದರ್ಲೆಂಡ್‌ ಆಟಗಾರ್ತಿ ಕಿಕಿ ಬರ್ಟೆನ್ಸ್‌ ಚಾಂಪಿಯನ್‌ ಆಗಿದ್ದಾರೆ. ಫೈನಲ್‌ನಲ್ಲಿ ಅವರು ಕ್ರೊವೇಶಿಯದ ಡೋನಾ ವೆಕಿಕ್‌ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದಾರೆ.

Advertisement

ರವಿವಾರ ನಡೆದ ಪಂದ್ಯದಲ್ಲಿ ಬರ್ಟೆನ್ಸ್‌ 7-6 (7-2), 6-4 ಸೆಟ್‌ಗಳಿಂದ ವೆಕಿಕ್‌ ಅವರನ್ನು ಸೋಲಿಸಿದರು. ಇದು ಕಿಕಿ ಹಾಗೂ ಡೊನ್ನಾ ನಡುವಿನ 4ನೇ ಮುಖಾಮುಖೀಯಾಗಿದ್ದು, ಈ ಹೋರಾಟ ಒಂದು ಗಂಟೆ 43 ನಿಮಿಷಗಳ ಕಾಲ ನಡೆಯಿತು. ಬರ್ಟೆನ್ಸ್‌ಗೆ ಇದು 8ನೇ ಟೆನಿಸ್‌ ಪ್ರಶಸ್ತಿಯಾಗಿದೆ.

“ಈ ಕೂಟದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ಮುಂದಿನ ವರ್ಷ ಮತ್ತೆ ಈ ಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ನನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದೇನೆ’ ಎಂದು ಬರ್ಟೆನ್ಸ್‌ ಹೇಳಿದ್ದಾರೆ.

ಥ್ಲಾಯೆಂಡ್‌ ಓಪನ್‌ ಟೆನಿಸ್‌
ಡಯಾನಾಗೆ ಒಲಿದ ಪ್ರಶಸ್ತಿ

ಅಜ್ಲಾ ವಿರುದ್ಧ 6-2, 2-6, 7-6 (7-3) ಜಯ ಹ್ಯೂ ಹಿನ್‌ (ಥ್ಲಾಯೆಂಡ್‌), ಫೆ. 4: ಉಕ್ರೇನಿನ ಡಯಾನಾ ಯಸ್ಟ್ರೆಮಸ್‌ಕಾ ಆಸ್ಟ್ರೇಲಿಯದ ಅಜ್ಲಾ ಟೊಮ್ಲಜಾನೋವಿಕ್‌ ವಿರುದ್ಧ ಗೆದ್ದು “ಥಾಯ್ಲೆಂಡ್‌ ಓಪನ್‌’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಡಯಾನಾ ಅವರು ಭಾರೀ ಹೋರಾಟದ ಬಳಿಕ ಅಜ್ಲಾ ಅವರನ್ನು 6-2, 2-6, 7-6 (7-3) ಸೆಟ್‌ಗಳಿಂದ ಸೋಲಿಸಿದರು. 18 ವರ್ಷದ ಡಯಾನಾ ಅವರಿಗಿದು ಟೆನಿಸ್‌ ಬಾಳ್ವೆಯ 2ನೇ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ.

Advertisement

ಮೊದಲ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ಡಯಾನಾ ಸುಲಭದಲ್ಲಿ ಜಯ ದಾಖಲಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಅಜ್ಲಾ ಅತ್ಯುತ್ತಮ ಆಟವಾಡಿ 6-2 ಅಂತರದಿಂದ ಜಯಿಸಿದರು. ಅಂತಿಮ ಸೆಟ್‌ನಲ್ಲಿ ಗೆಲುವಿಗಾಗಿ ಇವರಿಬ್ಬರ ನಡುವೆ ತೀವ್ರ ಹೋರಾಟವೇ ನಡೆಯಿತು. ಆರಂಭದಲ್ಲಿ ಮುನ್ನಡೆಯಲ್ಲಿದ್ದ ಡಯಾನಾ ಆಘಾತ ನೀಡಿದ ಅಜ್ಲಾ ಸೆಟ್‌ ಅನ್ನು ಟೈಬ್ರೇಕರ್‌ಗೆ ಸಾಗಿಸಿದರು. ಟ್ರೈಬ್ರೇಕರ್‌ನಲ್ಲಿ ಡಯಾನಾ ಗೆದ್ದರು. ಈ ಜಯವನ್ನು ಡಯಾನಾ ಚಿಕಿತ್ಸೆಗಾಗಿ ಉಕ್ರೇನ್‌ಗೆ ತೆರಳಿದ ತನ್ನ ತಾಯಿಗೆ ಅರ್ಪಿಸಿದ್ದಾರೆ.

ಡಯಾನಾ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಗಾರ್ಬಿನ್‌ ಮುಗುರುಜಾ ಅವರನ್ನು ಸೋಲಿಸಿದ್ದರು. ಡಯಾನಾ ಹಾಗೂ ಅಜ್ಲಾ ಫೈನಲ್‌ ವರೆಗೆ ಒಂದೂ ಸೆಟ್‌ ಕಳೆದುಕೊಂಡಿರಲಿಲ್ಲ.ಶಸ್ತ್ರಚಿಕಿತ್ಸೆಗಾಗಿ ಉಕ್ರೇನಿಗೆ ಮರಳಿರುವ ತಮ್ಮ ತಾಯಿಗೆ ಡಯಾನಾ ಈ ಗೆಲುವನ್ನು ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next