Advertisement

ಜಂಭದ ನರಿ

04:51 PM Apr 03, 2019 | Hari Prasad |

ಕಾಡಿನಲ್ಲಿ ನರಿಯೊಂದು
ಒಂಟಿಯಾಗಿ ಇದ್ದಿತು
ಹೇಳುವ ಕೇಳುವರಾರೂ ಇರದೇ
ತನ್ನಿಚ್ಛೆಯಂತೆ ನಡೆದಿತ್ತು||

Advertisement

ಕೆಟ್ಟ ಯೋಚನೆ ಬರಲು ಒಮ್ಮೆ
ತಪಸ್ಸಿಗೆ ಕುಳಿತಿತು
ಮೆಚ್ಚಿ ಬಂದ ದೇವರ ಎದುರು
ನಮ್ರವಾಗಿ ಬೇಡಿತು

ನಾನು ಬಯಸಿದವರು ಕೂಡಲೇ
ಸಾಯುವಂತೆ ಮಾಡು
ಇಲ್ಲವೆಂದು ಹೇಳದೇ ನನಗೆ
ಬಯಸಿದ ವರವನು ನೀಡು

ಕೇಡುಗಾಲ ಸಮೀಪ ಬಂದಿದೆ
ಎಂದು ದೇವ ನಕ್ಕನು
ನಿನ್ನಿಚ್ಛೆಯಂತೆ ಆಗಲೆಂದು
ಕೇಳಿದ ವರವನು ಕೊಟ್ಟನು

ಮಂತ್ರಶಕ್ತಿಯಿಂದ ನರಿಯು
ಪ್ರಾಣಿಗಳನು ಕೊಂದಿತು
ಬೇಟೆಯಾಡದೆ
ಅವುಗಳನು ತಿಂದು ತೇಗಿತು

Advertisement

ಕಷ್ಟ ಪಡದೇ ತಿನ್ನುತಿದ್ದ
ನರಿಯ ದೇಹವು ಊದಿತು
ಕೊಬ್ಬಿ ಕೊಬ್ಬಿ
ಒಂದು ದಿನ ಸತ್ತಿತು

— ಭೋಜರಾಜ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next