Advertisement
‘ಆಸ್ಪತ್ರೆಯಲ್ಲಿ ಮಕ್ಕಳ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆಯಲ್ಲಿ ಡಾ. ಕಫೀಲ್ ಖಾನ್ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರನ್ನು ವಜಾಗೊಳಿಸಲಾಗಿದೆ’ ಎಂದು ಯುಪಿ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
Related Articles
Advertisement
‘ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಪ್ರಕರಣದಲ್ಲಿ ಅಮಾನತುಗೊಂಡ ಎಂಟು ಜನರ ಪೈಕಿ ನನ್ನನ್ನು ಹೊರತುಪಡಿಸಿ ಇತರ ಏಳು ಜನರ ಅಮಾನತು ರದ್ದುಗೊಳಿಸಲಾಗಿದೆ. ನ್ಯಾಯಾಲಯವು ಅವರೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ವಿಧಿಸಿದೆ ಆದರೆ ಗೌರವಾನ್ವಿತ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ನನಗೆ ಕ್ಲೀನ್ ಚಿಟ್ ನೀಡಿದೆ, ”ಎಂದು ಡಾ ಖಾನ್ ಹೇಳಿದ್ದಾರೆ.
‘ಬಿಆರ್‌ಡಿ ವೈದ್ಯಕೀಯ ಕಾಲೇಜಿನಿಂದ ನನ್ನನ್ನು ವಜಾಗೊಳಿಸಿರುವ ಕುರಿತು ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಬುಧವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಆದರೆ ಅವರು ಇನ್ನೂ ಯಾವುದೇ ಪತ್ರವನ್ನು ನೀಡಿಲ್ಲ’ ಎಂದು ಡಾ ಖಾನ್ ಹೇಳಿದರು.
‘ನನ್ನನ್ನು ಆಗಸ್ಟ್ 22, 2017 ರಂದು ಅಮಾನತುಗೊಳಿಸಲಾಗಿತ್ತು, ಮಾರ್ಚ್ 5, 2019 ರಂದು, ಅಲಹಾಬಾದ್ ಹೈಕೋರ್ಟ್ ವಿಚಾರಣೆಯನ್ನು ಕೊನೆಗೊಳಿಸುವಂತೆ ಉತ್ತರ ಪ್ರದೇಶ ಸರಕಾರವನ್ನು ಕೇಳಿತ್ತು. ಏಪ್ರಿಲ್ 18, 2019 ರಂದು ಹೈಕೋರ್ಟ್ ನನಗೆ ಕ್ಲೀನ್ ಚಿಟ್ ನೀಡಿತ್ತು’ ಎಂದು ”ಡಾ. ಖಾನ್ ಹೇಳಿದರು.
‘ನಾನು ಜೈಲಿನಲ್ಲಿದ್ದಾಗ, ಸರಕಾರವು ಫೆಬ್ರವರಿ 24, 2020 ರಂದು ಮತ್ತೆ ನನ್ನ ವಿರುದ್ಧ ತನಿಖೆಯನ್ನು ಆರಂಭಿಸಿತು, ಆಗಸ್ಟ್ 6, 2021 ರಂದು, ಅಂದಿನ ಮುಖ್ಯ ಕಾರ್ಯದರ್ಶಿ ಮಾಂಶು ಕುಮಾರ್ ಅವರ ತನಿಖಾ ವರದಿಯನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಾಲಯದ ಮುಂದೆ ಘೋಷಿಸಿತ್ತು’ ಎಂದು ಡಾ ಖಾನ್ ಹೇಳಿದರು.
‘ಡಾ.ಖಾನ್ ಅವರನ್ನು ವಜಾಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ, ಇದು ದುರುದ್ದೇಶಪೂರಿತ ಮತ್ತು ಖಾನ್ ಅವರಿಗೆ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದೆ’ಎಂದು ಹೇಳಿದ್ದಾರೆ.
‘ಸಂವಿಧಾನಕ್ಕಿಂತ ಮೇಲಲ್ಲ ಎಂಬುದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ನ್ಯಾಯಕ್ಕಾಗಿ ಡಾ ಖಾನ್ ಅವರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಇರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.