Advertisement

ಕಿಡ್ನಿ ಜಾಗೃತಿ ಜಾಥಾದಲ್ಲಿ ಶಿವಣ್ಣ ಹೆಜ್ಜೆ

11:54 AM Mar 10, 2017 | |

ಮಹದೇವಪುರ: ವಿಸ್ವ ಮೂತ್ರ ಪಿಂಡ ದಿನಾಚರಣೆ ಅಂಗವಾಗಿ ವೈಟ್‌ಫೀಲ್ಡ್‌ ನ ವೈದೇಹಿ ಆಸ್ಪತ್ರೆ ಬಳಿ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.  ಚಿತ್ರನಟ ಡಾ. ಶಿವರಾಜ್‌ಕುಮಾರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದರು.

Advertisement

“ಒಬ್ಬ ವ್ಯಕ್ತಿಯ ಅಂಗಾಂಗಗಳ ದಾನದಿಂದ 15 ಮಂದಿಯ ಜೀವ ಉಳಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಅಂಗಾಂಗಗಳ ದಾನಕ್ಕೆ ಮನಸ್ಸು ಮಾಡಬೇಕು. ವ್ಯಕ್ತಿಯೊಬ್ಬರು ಮೃತಟ್ಟರೆ ಅವರ ಇಡೀ ಕುಟುಂಬ ನೋವಿನಲ್ಲಿರುತ್ತದೆ. ಅಂಥ ಸಂದರ್ಭದಲ್ಲೂ ಮತ್ತೂಂದು ಜೀವದ ಉಳಿವಿಕೆಗೆ ಯೋಚನೆ ಮಾಡುವುದು ದೊಡ್ಡತನ. ಅಂಗಾಂಗ ದಾನದ ಬಗ್ಗೆ ಕೆಲವರಲ್ಲಿ ಪೂರ್ವಪೀಡಿತ ಕಲ್ಪನೆಗಳಿವೆ. ಅವುಗಳನ್ನು ಅಳಿಸಿಹಾಕಬೇಕಾದ ಅಗತ್ಯವಿದೆ,” ಎಂದರು. 

“ದೇಶದಲ್ಲಿ ಪ್ರತಿವರ್ಷ 1ಲಕ್ಷ ಜನ ಶಾಶ್ವತ ಕಿಡ್ನಿ ವೈಪಲ್ಯಕ್ಕೆ ಸಿಲುಕುತ್ತಿದ್ದಾರೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದು ಮಾತ್ರ ಕೇವಲ 6ರಿಂದ 7ಸಾವಿರ ಜನ. ಇದಕ್ಕೆ ಹಣಕಾಸಿನ ಬಿಕ್ಕಟ್ಟೂ ಕಾರಣವಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು. ಇದೆ ವೇಳೆ ಮಾತನಾಡಿದ ಮಲ್ಯ ಆಸ್ಪತ್ರೆಯ ನೆಪ್ರಾಲಜಿ ತಜ್ಞ ಡಾ.ಅರುಣ್‌ “ಪ್ರತಿದಿನ ಅರ್ಧ ಗಂಟೆ ಒಬ್ಬ ವ್ಯಕ್ತಿ ವ್ಯಾಯಾಮ ಮಾಡಿದರೆ ಕಿಡ್ನಿ ವೈಪಲ್ಯ ತಡೆಯಬಹುದು,” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next