Advertisement

ಪರೀಕ್ಷೆ ಬರೆಯಲು ಹೋದ ಪುತ್ರಿ ತಾಯಿಯ ಕಣ್ಣೆದುರೇ ಯುವಕನೊಂದಿಗೆ ಪರಾರಿ

11:28 PM May 09, 2022 | Team Udayavani |

ಕೊಳ್ಳೇಗಾಲ : ಪಿಯುಸಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಯ ಎದುರೇ ಯುವಕನೊಂದಿಗೆ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ವಿದ್ಯಾರ್ಥಿನಿ ನಾಪತ್ತೆಯಾದವಳು.

ಈಕೆ ನಗರದ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಅಂತಿಮ ವಿಷಯ ಪರೀಕ್ಷೆ ಬರೆಯಲು ಬಂದಿದ್ದಾಳೆ ಈ ವೇಳೆ ಈಕೆಯ ತಾಯಿಯೂ ಜೊತೆಗೆ ಬಂದಿದ್ದಾರೆ ಆದರೆ ಕಾಲೇಜು ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿನಿ ಓಡಲಾರಂಭಿಸಿದ್ದಾಳೆ ತಾಯಿಯ ಎದುರೇ ಓಡುತ್ತಿದ್ದ ಮಗಳನ್ನು ಕಂಡು ಎಲ್ಲಿಗೆ ಹೋಗುತಿದ್ದೀಯಾ ಎಂದು ಕೇಳುವಷ್ಟರಲ್ಲಿ ಯುವಕ ಬಂದಿದ್ದ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.

ಘಟನೆ ನಡೆದ ವೇಳೆ ಕಂಗಾಲಾದ ತಾಯಿ, ಅದೇ ಗ್ರಾಮದ ನಾಗರಾಜು ಎಂಬುವನ ಜೊತೆ ಮಗಳು ಪರಾರಿಯಾಗಿದ್ದಾಳೆ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿಯಿಂದ ಹೊರಟ ವಿಮಾನಕ್ಕೆ ಹಕ್ಕಿ ಡಿಕ್ಕಿ : ಸುರಕ್ಷಿತವಾಗಿ ಲ್ಯಾಂಡ್‌ ಆದ ಸ್ಪೈಸ್‌ಜೆಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next