Advertisement

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

11:13 AM Jan 09, 2025 | Team Udayavani |

ಲಕ್ನೋ: ತನ್ನ ಅಪಹರಣವಾಗಿದೆ ಎಂದು ಕುಟುಂಬಸ್ಥರಿಗೆ ನಂಬಿಸಿ, ಹಣ ದೋಚಲು ಹೋಗಿದ್ದ ಭೂಪನೊಬ್ಬ ಬೆದರಿಕೆ ಪತ್ರದಲ್ಲಿ “ಡೆತ್‌’ ಪದ ತಪ್ಪಾಗಿ ಬರೆದು ಸಿಕ್ಕಿಬಿದ್ದ‌ ಘಟನೆ ಉತ್ತರ ಪ್ರದೇಶದ ಬಂದರಹಾ ಗ್ರಾಮದಲ್ಲಿ ನಡೆದಿದೆ.

Advertisement

“ನಿಮ್ಮ ತಮ್ಮ ಸಂದೀಪ್‌ನನ್ನು ಅಪಹರಿಸಿದ್ದೇವೆ, 50,000 ರೂ. ಕೊಡದಿದ್ದರೆ ಆತನನ್ನು ಕೊಲ್ಲುತ್ತೇವೆ ಎಂದು ಸಂಜಯ್‌ ಎಂಬವರಿಗೆ ಪತ್ರ ಬಂದಿದೆ. ಇದರಿಂದ ಗಾಬರಿಗೊಂಡ ಸಂಜಯ್ ಪೊಲೀಸರಿಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂದೀಪ್‌ನನ್ನು ಪತ್ತೆ ಹಚ್ಚಿದ್ದಾರೆ, ಆದರೆ ಆತನ ಅಪಹರಣ ನಡೆದಿರುವ ಬಗ್ಗೆ ಪೊಲೀಸರಿಗೆ ಅನುಮಾನ ಹುಟ್ಟಿದೆ ಹಾಗಾಗಿ ಸಂದೀಪ್ ನನ್ನ ವಿಚಾರಗೆ ಒಳಪಡಿಸಿ ಬಳಿಕ ಆತನ ಕೈಯಿಂದಲೇ ಬೆದರಿಕೆ ಪತ್ರ ಬರೆಯಲು ಹೇಳಿದ್ದಾರೆ ಆಗ ಪತ್ರ ಬರೆಯುವ ವೇಳೆ ಡೆತ್ ಎಂಬ ಪದವನ್ನು ಸಹೋದರನಿಗೆ ಬರೆದ ಪತ್ರದಲ್ಲಿ ಹೇಗಿತ್ತೋ ಅದೇ ರೀತಿ ತಪ್ಪಾಗಿ ಬರೆದಿದ್ದಾನೆ ಇದರಿಂದ ಪೊಲೀಸರ ಮನದಲ್ಲಿದ್ದ ಶಂಕೆ ದೃಢವಾಯಿತು ಬಳಿಕ ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಸಂದೀಪ್ ತಾನೇ ಪತ್ರ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next