Advertisement

ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಏಳು ಮಂದಿ ಸದಸ್ಯರ ಅಪಹರಣ!

08:59 AM Jan 31, 2021 | Team Udayavani |

ಬಸವಕಲ್ಯಾಣ (ಬೀದರ್​): ತಾಲೂಕಿನ ಚಂಡಕಾಪೂರ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ಬರುತ್ತಿದ್ದ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿಯೊಬ್ಬರ ಕುಟುಂಬದವರು ಹಲ್ಲೆ ನಡೆಸಿ, 7 ಜನ ಸದಸ್ಯರನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿದ್ದು, ಈ ಕುರಿತಂತೆ ಗ್ರಾಮೀಣ‌ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗ್ರಾ.ಪಂ ಸದಸ್ಯೆ ಪುತಳಾಬಾಯಿ ಕುಟುಂಬದವರು ಸದಸ್ಯರನ್ನು ಅಪಹರಿಸಿದ್ದು, ಈ ವೇಳೆ ಮಹಿಳಾ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸದಸ್ಯೆ ಮಹಾದೇವಿ ಸ್ವಾಮಿ ಎನ್ನುವರು 6 ಜನರ ವಿರುದ್ಧ ನೀಡಿರುವ ದೂರು ದಾಖಲಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪುತಳಾಬಾಯಿ ಕುಟುಂಬದವರು ಒಬ್ಬ ಸದಸ್ಯರಿಗೆ ತಲಾ 2 ಲಕ್ಷ ರೂ. ಆಮಿಷವೊಡ್ಡಿದ್ದರು ಎನ್ನಲಾಗಿದ್ದು, ಇದನ್ನು ನಿರಾಕರಿಸಿ 10 ಜನ ಸದಸ್ಯರು ಕಲಬುರಗಿ ತುಳಜಾಪುರ ಮತ್ತಿತ್ತರ ಕಡೆಗೆ ಯಾತ್ರೆ ಹೋಗಿದ್ದಾರೆ. ಶನಿವಾರ ಚಡಂಕಾಪೂರ ಗ್ರಾಮದ ಕಡೆ ವಾಪಸ್ ಬರುತ್ತಿದ್ದಾಗ  ತಡೋಳಾ ಬಳಿ 20ಕ್ಕೂ ಹೆಚ್ಚು ಜನ ವಾಹನಗಳಿಗೆ ಅಡ್ಡಗಟ್ಟಿ 7 ಜನ ಸದಸ್ಯರಿಗೆ ಒತ್ತಾಯದಿಂದ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಕಂಬಳವನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ರೂಪಿಸಬೇಕು: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರ ತಂಡ, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದೆ.

Advertisement

ಚಂಡಕಾಪೂರ ಗ್ರಾ.ಪಂ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗೆ ಅಗತ್ಯ ಸದಸ್ಯರ ಸಂಖ್ಯೆ ಲಭ್ಯವಿಲ್ಲದ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಗಿದೆ. ಒಟ್ಟು 20 ಜನ ಸದಸ್ಯ ಬಲದ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಶನಿವಾರ ದಿನಾಂಕ ನಿಗದಿಯಾಗಿತ್ತು. ಆದರೆ, ಚುನಾವಣೆ ಪ್ರಕ್ರಿಯೆ ವೇಳೆ 9 ಜನ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಹೀಗಾಗಿ ಕೋರಂ ಕೊರತೆ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next