Advertisement
ಕೆ.ಜಿ.ಹಳ್ಳಿಯ ಆರೋಕಿಯಮ್ಮ ಲೇಔಟ್ ನಿವಾಸಿ ಶೇಖ್ ಜಬಿವುಲ್ಲಾ (26), ರಾಚೇನಹಳ್ಳಿಯ ಸೈಯದ್ ಅಬ್ದುಲ್ ಅಜೀಂ(31),ಬಿ.ಎಂ.ಲೇಔಟ್‌ನ ಶಾಬಾಜ್(27), ಜಯನಗರದ ರಿಯಾಜ್ (27) ಬಂಧಿತರು. ಅವರಿಂದ ಅಪಹೃತ ರಿಚರ್ಡ್‌ಟೌನ್ ನಿವಾಸಿ ಸೈಯದ್ ಅಹ್ಮದ್ ಅವರನ್ನು ರಕ್ಷಿಸಲಾಗಿದೆ. ಜತೆಗೆ ಕೃತ್ಯಕ್ಕೆ ಬಳಸಿದ್ದ ಬಿಎಂಡಬ್ಲೂé ಕಾರು ಹಾಗೂ ಐದು ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಬಂಧಿತರಿಗೆ ಸುಪಾರಿಕೊಟ್ಟಿದ್ದ ಅಸ್ಲಾಂ: ನಾಲ್ವರು ಬಂಧಿತರಿಗೆ ಅಸ್ಲಾಂ, ಆರೇಳು ತಿಂಗಳ ಹಿಂದೆಯೇ ಸೈಯದ್ ಅಹ್ಮದ್ ಅಪಹರಣಕ್ಕೆ ಸುಪಾರಿ ಕೊಟ್ಟಿದ್ದ. ಮುಂಗಡವಾಗಿ 20 ಸಾವಿರ ರೂ. ನೀಡಿದ್ದ. ಅಲ್ಲದೆ,ಸೈಯದ್ ಅಹ್ಮದ್ ಬಳಿ ಬಹಳಷ್ಟು ಹಣವಿದೆ. ಆತನ ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು ಬಂದ ಹಣದಲ್ಲಿ ಶೇ.80ರಷ್ಟು ಇಟ್ಟುಕೊಂಡು ಬಾಕಿ ಹಣ ಕೊಡುವಂತೆ ಆರೋಪಿಗಳಿಗೆ ಆಮಿಷವೊಡ್ಡಿ. ಹೀಗಾಗಿ ಆರೋಪಿಗಳು ಈ ಹಿಂದೆ ನಾಲ್ಕೈದು ಬಾರಿ ಅಪಹರಣಕ್ಕೆ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಆದರೆ, ಫೆ.16ರಂದು ತಮ್ಮ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವಾಗ ಕಾರಿನಲ್ಲಿ ಬಂದ ಆರೋಪಿಗಳು ಮಾತನಾಡಬೇಕೆಂದು ಸೈಯದ್ ಅಹ್ಮದ್‌ನನ್ನು ಹೊರಗಡೆ ಕರೆತಂದು ಏಕಾಏಕಿ ಕಾರಿನಲ್ಲಿ ಕೂರಿಸಿಕೊಂಡು ಹೊರಮಾವು ಕಡೆ ಕರೆದೊಯ್ದಿದ್ದಾರೆ. ಇದೇ ವೇಳೆ ಕಾರನ್ನು ಹಿಂಬಾಲಿಸುತ್ತಿದ್ದ ಸೈಯದ್ ಸ್ನೇಹಿದ ನವೀದ್ ಖಾನ್‌ಗೂ ಮಾರ್ಗ ಮಧ್ಯೆ ಮಾರಕಾಸ್ತ್ರ ತೋರಿಸಿ ಕಾರಿನಲ್ಲಿ ಕೂರಿಸಿಕೊಂಡು ಹೊಸಕೋಟೆ-ಕೆ,ಆರ್.ಪುರಂ ಮಾರ್ಗಮಧ್ಯೆ ಶೆಲ್ ಪೆಟ್ರೋಲ್ ಬಂಕ್ ಬಳಿ, ಸೈಯದ್ ಖಾತೆಯಿಂದ ಐದು ಸಾವಿರ ರೂ. ಅನ್ನು ಆರೋಪಿಗಳು ಫೋನ್ ಪೇ ಮಾಡಿಸಿಕೊಂಡು ಮತ್ತೂಮ್ಮೆ ಕರೆ ಮಾಡಿದಾಗ 3 ಲಕ್ಷ ರೂ. ಕೊಡಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಗಾಬರಿಗೊಂಡ ಸೈಯದ್ ತಡರಾತ್ರಿ 12 ಗಂಟೆ ಸುಮಾರಿಗೆ ಠಾಣೆಗೆ ಹಾಜರಾಗಿ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಂತರ ಆರೋಪಿಗಳ ಬಗ್ಗೆ ತಾಂತ್ರಿಕ ತನಿಖೆ ನಡೆಸಿ ಪ್ರಕರಣದ ಮೊದಲ ಆರೋಪಿ ಯಾಸೀನ್‌ನಗರದಲ್ಲಿರುವ ವಿಸ್ಟರ್ ವಾಷಾ ಸರ್ವೀಸ್ ಸೆಂಟರ್ ಮಾಲೀಕರ ಶೇಕ್ ಜಬಿವುಲ್ಲಾನನ್ನು ಬಂಧಿಸಿ, ಈತನ ಹೇಳಿಕೆ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.