Advertisement

ಪ್ರೀ ನರ್ಸರಿಗೆ ಅನುಮತಿಯೇ ಪಡೆದಿಲ್ಲ ಕಿಡ್ಜೀ!

12:13 PM Feb 22, 2017 | |

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಗೆ ಸಾಕ್ಷಿಯಾದ ಬೆಳ್ಳಂದೂರಿನ “ಕಿಡ್ಜೀ’ ಶಾಲೆಯು ಪೂರ್ವ ಪ್ರಾಥ ಮಿಕ ತರಗತಿಗಳ ಪ್ರವೇಶಕ್ಕೆ ಸರ್ಕಾರದಿಂದ ಅನುಮತಿ ಯನ್ನೇ ಪಡೆದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. 

Advertisement

ಕಳೆದ ಎಂಟು ವರ್ಷಗಳಿಂದ ಶಾಲೆ ನಡೆಯುತ್ತಿದ್ದರೂ ಈ ವರೆಗೂ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದ ಬಳಿಕ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಮಾನ್ಯತಾ ಪ್ರಮಾಣಪತ್ರಗಳ ಪರಿಶೀಲನೆ ನಡೆಸಿದಾಗ ಈ ವಿಚಾರ ಗಮನಕ್ಕೆ ಬಂದಿದೆ. 

ಶುಲ್ಕ ಹಿಂದಿರುಗಿಸಿ ಬೇರೆ ಶಾಲೆ ನೋಡಿಕೊಳ್ಳುತ್ತೇವೆ: ಈ ಮಧ್ಯೆ ಮಂಗಳವಾರ ಶಾಲೆಯ ಮುಂದೆ ಹಲವು ಪೋಷಕರು ಜಮಾಯಿಸಿ ಪ್ರತಿಭಟನೆ ನಡೆಇಸಿದ್ದಾರೆ. ಘಟನೆ ನಡೆದ ಮೇಲೂ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ತೋರಿದ ಶಾಲಾ ಆಡಳಿತ ಮಂಡಳಿ ವಿರುದ್ಧ ಮತ್ತು ಶಾಲೆಯ ಪ್ರಾಂಶುಪಾಲೆ ಡಾ.ವೀಣಾ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. 

“ಹಲವು ಪೋಷಕರು ಶಾಲೆಗೆ ಸರ್ಕಾರ ಬೀಗ ಹಾಕಲಿ. ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ. ನಮ್ಮ ಮಕ್ಕಳ ಪ್ರವೇಶಕ್ಕೆ ಪಡೆದಿರುವ ಎಲ್ಲ ರೀತಿಯ ಶುಲ್ಕವನ್ನು ಶಾಲೆ ಆಡಳಿತ ಮಂಡಳಿಯಿಂದ ಸರ್ಕಾರ ವಾಪಸ್‌ ಕೊಡಿಸಬೇಕು,” ಎಂದು  ಒತ್ತಾಯಿಸಿದರು.

ಮಾನವ ಹಕ್ಕು ಆಯೋಗದಿಂದ ನೋಟಿಸ್‌ ಸಾಧ್ಯತೆ: ಶಾಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪೋಷಕರು ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರು ಆಧರಿಸಿ ಆಯೋಗ ಪ್ರಕರಣ ದಾಖಲಿಸಿಕೊಂಡಿದ್ದು ಸದ್ಯದಲ್ಲೇ ಶಾಲೆಗೆ ನೋಟಿಸ್‌ ಜಾರಿ ಮಾಡಲು ನಿರ್ಧರಿಸಿದೆ. 

Advertisement

ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದ ಉಗ್ರಪ್ಪ: ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ಉಗ್ರಪ್ಪ ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಪೋಷಕರೊಂದಿಗೆ ಚರ್ಚೆ ನಡೆಸಿ ಅವರ  ಅಳಲನ್ನು ಆಲಿಸಿದರು. ಇದೆ ವೇಳೆ ಮಾತನಾಡಿದ ಅವರು, “ನಾಗರಿಕ ಸಮಾಜದಲ್ಲಿ ಮಕ್ಕಳ ಮೇಲೆ ಇಂತಹ ಕೃತ್ಯಗಳು ನಡೆಯುವುದು ಅಮಾನವೀಯ. ಪೊಲೀಸರು ಈಗಾಗಲೇ ಐದು ಮಂದಿಯನ್ನು ಬಂಧಿಸಿ ತನಿಖೆ ಕೈಗೊಂ ಡಿದ್ದಾರೆ. ಪ್ರಕರಣ ಕುರಿತಂತೆ ವರದಿಯನ್ನು ಸಮಿತಿವತಿಯಿಂದ ಸರ್ಕಾರಕ್ಕೆ ನೀಡಲಾಗುವುದು. ಸರ್ಕಾರ ನೀಡಿದ ಆದೇಶ ದನ್ವಯ ಕ್ರಮ ಕೈಗೊಳ್ಳಲಾಗುವುದು,” ಎಂದರು.

ಈ ವರೆಗೆ ಐವರು ವಶಕ್ಕೆ
ಮಾರತ್ತಹಳ್ಳಿ ಪೊಲೀಸರು ಪೋಕೊÕà ಕಾಯ್ದೆಯಡಿ ಈಗಾಗಲೇ ಆರೋಪಿ ಮಂಜು ಮಂಜುನಾಥ್‌ ಮತ್ತು ಶಾಲೆಯ ಪ್ರಾಂಶುಪಾಲೆ ವೀಣಾರನ್ನೂ ವಶಕ್ಕೆ ಪಡೆದಿದ್ದ ಪೊಲೀಸರು ಸದ್ಯ  ಶಾಲೆಯ ವ್ಯವಸ್ಥಾಪಕ ಪ್ರವೀಣ್‌, ಮಕ್ಕಳ ಪಾಲಕಿ ನೀತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಮಂಗಳವಾರವೂ ಸಹ ಶಾಲೆಯ ಮುಂದೆ 70ಕ್ಕೂ ಹೆಚ್ಚು ಪೋಷಕರು ಜಮಾವಣೆಗೊಂಡು ಶಾಲೆಯ ಗಾಜನ್ನು ಪುಡಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next