ಉಡುಪಿ: ಉಡುಪಿಯ ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಜ. 29 ರಂದು ಬೆಳಗ್ಗೆ 7ರಿಂದ ಶ್ರೀ ನಾಗಸನ್ನಿಧಿಯಲ್ಲಿ ಸರ್ಪ ಮಂತ್ರ ತ್ರಯ ಹೋಮ, ಧನ್ವಂತರಿ ಹವನ, ನಾಗದೇವರಿಗೆ ಮಹಾಪೂಜೆ, 7.30ರಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕ ವೇ| ಮೂ| ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಮತ್ತು ಬಳಗದವರಿಂದ ಮಹಾ ರುದ್ರಯಾಗ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5ರಿಂದ ವನದುರ್ಗಾ ಮಂತ್ರ ಹವನ ನಡೆಯಲಿದೆ.
ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿರುವರು. ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಉಪನ್ಯಾಸ ನೀಡಲಿರುವರು. ಅಧ್ಯಕ್ಷತೆಯನ್ನು ನಾಡೋಜ ಡಾ| ಜಿ. ಶಂಕರ್ ವಹಿಸಲಿರುವರು.
ಸೇವಾಕರ್ತ ಭುವನೇಂದ್ರ ಕಿದಿಯೂರು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ರವಿರಾಜ ಆಚಾರ್ಯ, ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ಆಡಳಿತ ಟ್ರಸ್ಟಿ ದಿವಾಕರ ಶೆಟ್ಟಿ, ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ನ ಮಾಲಕ ವೀರೇಂದ್ರ ಹೆಗ್ಡೆ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಯುಎಇ ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಸಿ. ಎ., ಬಹೆರೈನ್ ಮೊಗವೀರ ಸಂಘದ ಉಪಾಧ್ಯಕ್ಷ ಶಿಲ್ಪಾ ಶಮಿತ್ ಕುಂದರ್, ಕಾರ್ತಿಕ್ ಗ್ರೂಪ್‌ನ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಡಾ| ಮಂಜರಿಚಂದ್ರ ಪುಷ್ಪರಾಜ್ ಮತ್ತು ಬಳಗದವರಿಂದಸಂಪೂರ್ಣ ಶ್ರೀಕೃಷ್ಣ ದರ್ಶನ ನೃತ್ಯರೂಪಕ ನಡೆಯಲಿದೆ. ರಾತ್ರಿ 8ರಿಂದ ಕಿದಿಯೂರು ಹೊಟೇಲ್‌ನ ಎದುರುಗಡೆ ವಿಶೇಷವಾಗಿ ರಚಿಸಲಾದ ವಿವಿಧ ವೇದಿಕೆಗಳಲ್ಲಿ ವಾರಾಣಾಸಿಯಿಂದ ಆಗಮಿಸಿರುವ ಪರಿಣಿತ ಅರ್ಚಕ ವೃಂದದವರಿಂದ ವೈಶಿಷ್ಟ್ಯಪೂರ್ಣ ಆಕರ್ಷಕ ಸಾಮೂಹಿಕ ಗಂಗಾರತಿ ನಡೆಯಲಿದೆ.
ಅಶ್ವತ್ಥ ವಿವಾಹ, ಲಕ್ಷ್ಮೀನಾರಾಯಣ ಹೃದಯ ಹೋಮ
ಉಡುಪಿಯ ಕಿದಿಯೂರು ಹೊಟೇಲ್ಸ್ ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ
ಪ್ರಯುಕ್ತವಾಗಿ ಜ. 28ರಂದು ಬೆಳಗ್ಗೆ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ನಾಗಸನ್ನಿಧಿಯಲ್ಲಿ ನವಗ್ರಹ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಹೋಮ, ಬೆಳಗ್ಗಿನ 10ರ ಮೀನ ಲಗ್ನ ಸುಮುಹೂರ್ತದಲ್ಲಿ ಅಶ್ವತ್ಥೋಪನಯನ ಮತ್ತು ಅಶ್ವಥ ವಿವಾಹ ಹಾಗೂ ನಾಗದೇವರಿಗೆ ಮಹಾಪೂಜೆ ನಡೆಯಿತು. ಸಂಜೆ ದುರ್ಗಾ ಪೂಜೆ, ಕನ್ನಿಕಾ ಆರಾಧನೆ, ರಾತ್ರಿಪೂಜೆ ನಡೆಯಿತು.
ಸೇವಾಕರ್ತ ಭುವನೇಂದ್ರ ಕಿದಿಯೂರು, ಆಯೋಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ಭವ್ಯಶ್ರೀ ಕಿದಿಯೂರು, ಡಾ| ವಿಜಯೇಂದ್ರ ರಾವ್, ಗಣೇಶ್ ರಾವ್, ಹರಿಯಪ್ಪ ಕೋಟ್ಯಾನ್, ಹಿರಿಯಣ್ಣ ಕಿದಿಯೂರು, ಬೃಜೇಶ್ ಬಿ. ಕಿದಿಯೂರು, ಹೀರಾ ಬಿ. ಕಿದಿಯೂರು, ಜಿತೇಶ್ ಬಿ. ಕಿದಿಯೂರು, ಪ್ರಿಯಾಂಕ ಬಿ. ಕಿದಿಯೂರು, ವನಜಾ ಹಿರಿಯಣ್ಣ, ಪಾಂಡುರಂಗ ಕರ್ಕೇರ, ಭೋಜರಾಜ್ ಕಿದಿಯೂರು, ಮಧುಸೂದನ್ ಕೆಮ್ಮಣ್ಣು, ದಿನೇಶ್ ಎರ್ಮಾಳ್, ವಿಲಾಸ್ ಜೈನ್, ದಿನಕರ, ಪ್ರಕಾಶ್ ಜತ್ತನ್, ರಮೇಶ್ ಕಿದಿಯೂರು, ಪ್ರಕಾಶ್ ಸುವರ್ಣ, ಚಂದ್ರೇಶ್ ಪಿತ್ರೋಡಿ, ಲಕ್ಷ್ಮಣ್ ಮೈಂದನ್ ಪಾಲ್ಗೊಂಡಿದ್ದರು.