Advertisement

ಕಿದಂಬಿ ಶ್ರೀಕಾಂತ್‌ಗೆ ಪದ್ಮಶ್ರೀ:  ಮಾಜಿ ಕ್ರೀಡಾ ಸಚಿವ ಶಿಫಾರಸು

07:43 AM Nov 02, 2017 | Team Udayavani |

ಹೊಸದಿಲ್ಲಿ: 2017ರ ಋತು ವಿನಲ್ಲಿ ಅತ್ಯದ್ಭುತ ನಿರ್ವಹಣೆ ನೀಡಿ ಈಗಾಗಲೇ ನಾಲ್ಕು ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಗೆದ್ದಿರುವ ಭಾರತೀಯ ಬ್ಯಾಡ್ಮಿಂಟನ್‌ ರಂಗದ ಹೊಸ ಸೂಪರ್‌ತಾರೆ ಕಿದಂಬಿ ಶ್ರೀಕಾಂತ್‌ ಅವರನ್ನು ಮಾಜಿ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಬುಧವಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

Advertisement

ಕಳೆದ ವಾರ ಫ್ರೆಂಚ್‌ ಓಪನ್‌ ಗೆಲ್ಲುವ ಮೂಲಕ ಶ್ರೀಕಾಂತ್‌ ಕ್ಯಾಲೆಂಡರ್‌ ವರ್ಷ ವೊಂದರಲ್ಲಿ ನಾಲ್ಕು ಸೂಪರ್‌ ಸೀರೀಸ್‌ ಕೂಟದ ಪ್ರಶಸ್ತಿ ಗೆದ್ದ ಭಾರತದ ಮೊದಲ ಮತ್ತು ವಿಶ್ವದ ನಾಲ್ಕನೇ ಶಟ್ಲರ್‌ ಎಂಬ ಗೌರವಕ್ಕೆ ಪಾತ್ರರಾದರು. 

ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಶ್ರೀಕಾಂತ್‌ ಅವರ ಹೆಸರನ್ನು ಶಿಫಾರಸು ಮಾಡುವಂತೆ ಸದ್ಯ ಸಂಸದೀಯ ವ್ಯವಹಾರಗಳ ಸಚಿವ ಗೋಯಲ್‌ ಅವರು ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಪದ್ಮ ಪ್ರಶಸ್ತಿಗೆ ಹೆಸರು ನೀಡಲು ಸೆ. 15 ಕೊನೆಯ ದಿನವಾಗಿದೆ. 

ಪುರುಷರ ಸಿಂಗಲ್ಸ್‌ನಲ್ಲಿ ಚೀನದ ದಂತಕಥೆ ಲಿನ್‌ ಡ್ಯಾನ್‌, ಅವರ ಜತೆಗಾರ ಚೆನ್‌ ಲಾಂಗ್‌ ಮತ್ತು ಮಲೇಶ್ಯದ ತಾರೆ ಲೀ ಚಾಂಗ್‌ ವೆಯಿ ಅವರು ಒಂದು ಋತುವಿನಲ್ಲಿ ನಾಲ್ಕು ಸೂಪರ್‌ ಸೀರೀಸ್‌ ಕೂಟದ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. 

ಈ ವರ್ಷ 24ರ ಹರೆಯದ ಶ್ರೀಕಾಂತ್‌ ಐದು ಕೂಟಗಳಲ್ಲಿ ಫೈನಲಿಗೇರಿದ್ದರು. ಸಿಂಗಾಪುರ ಓಪನ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಫೈನಲ್‌ನಲ್ಲಿ ಅವರು ತನ್ನ ದೇಶದವರೇ ಆದ ಬಿ ಸಾಯಿ ಪ್ರಣೀತ್‌ಗೆ ಶರಣಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next