ಬೆಂಗಳೂರು : ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸೆಣಸಾಡುತ್ತಿರುವಾಗಲೇ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಿದ್ದ ಮೈಸೂರಿನ ಹೊಸಕೇರಿ ನಿವಾಸಿಯಾಗಿರುವ ನಿಖಿಲ್ (24) ಸಾವನ್ನಪ್ಪಿದ ಬಾಕ್ಸರ್.
ಘಟನೆ ವಿವರ : ಕೆ ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಇವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ನಿಖಿಲ್ ಕೂಡಾ ಭಾಗವಹಿಸಿದ್ದರು ಕಿಕ್ ಬಾಕ್ಸಿಂಗ್ ಸ್ಪರ್ಧೆ ನಡೆಯುವ ವೇಳೆ ಎದುರಾಳಿಯ ಪಂಚ್ ಗೆ ನಿಖಿಲ್ ತಲೆಗೆ ಗಂಭೀರ ಗಾಯವಾಗಿ ತಕ್ಷಣ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿಖಿಲ್ ನನ್ನು ನಾಗರ ಬಾವಿಯಲ್ಲಿರುವ ಜಿ.ಎಂ. ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಖಿಲ್ ಸಾವನ್ನಪ್ಪಿದ್ದಾನೆ.
ಘಟನೆಯ ಕುರಿತು ನಿಖಿಲ್ ಪೋಷಕರು ಹೇಳಿರುವಂತೆ ಸ್ಪರ್ಧೆ ಆಯೋಜಕರು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಆಂಬುಲೆನ್ಸ್, ಸ್ಟ್ರೆಚ್ಚರ್, ಹಾಗೂ ವೈದ್ಯರನ್ನು ನಿಯೋಜಿಸಿರಲಿಲ್ಲ ಅಲ್ಲದೆ ಸ್ಪರ್ಧೆ ಐದನೇ ಮಹಡಿಯಲ್ಲಿ ನಡೆದಿತ್ತು ಅಲ್ಲಿಂದ ನಿಖಿಲ್ ನನ್ನು ಹೊತ್ತುಕೊಂಡೇ ಬರಬೇಕಾಯಿತು ಅಲ್ಲದೆ ತುರ್ತು ವ್ಯವಸ್ಥೆಗೆಂದು ಆಮ್ಲಜನಕದ ವ್ಯವಸ್ಥೆಯೂ ಇರಲಿಲ್ಲ ಹೀಗಾಗಿ ನಿಖಿಲ್ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ನಡೆದ ಬಳಿಕ ಸ್ಪರ್ಧೆ ಆಯೋಜಿಸಿದ್ದ ವ್ಯಕ್ತಿಯೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಕರ ವಿರುದ್ಧ ಮೃತ ನಿಖಿಲ್ ಕುಟುಂಬಸ್ಥರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ : S1EP- 259: ಗ್ರಹಿಣಿಯ ಬದುಕನ್ನು ಎಂದೂ ವಿಶ್ಲೇಷಿಸಿ, ಹೀನಾಯಿಸಬೇಡ