ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಿಚ್ಚನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿದರು. ಈ ಭೇಟಿಯ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರ ರಾಜಕೀಯ ಪದಾರ್ಪಣೆ ಕುರಿತು ಅವರು ಚರ್ಚಿಸಿದ್ದಾರೆಯೇ ಎಂಬುದನ್ನು ನಟ ಅಥವಾ ಡಿಕೆ ಶಿವಕುಮಾರ್ ಖಚಿತಪಡಿಸಿಲ್ಲ.
ಇದನ್ನೂ ಓದಿ:ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
ಇದು ಸೌಜನ್ಯದ ಭೇಟಿಯಾಗಿದ್ದು, ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರಾಗಲು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುದೀಪ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಈ ಹಿಂದೆಯೂ ನಡೆದಿತ್ತು. ಇತ್ತೀಚೆಗೆ ನಟಿ ರಮ್ಯಾ ಮೂಲಕ ಸುದೀಪ್ ಅವರನ್ನು ಸೆಳೆಯುವ ಪ್ರಯತ್ನವಾಗಿತ್ತು ಎಂದು ವರದಿಯಾಗಿತ್ತು.