Advertisement

Sandalwood: ಉಪೇಂದ್ರ ʼಯು-ಐʼ ಜತೆ ʼಮ್ಯಾಕ್ಸ್‌ʼ ಕ್ಲ್ಯಾಶ್:‌ ಕಿಚ್ಚ ಹೇಳಿದ್ದೇನು?

10:42 AM Dec 03, 2024 | Team Udayavani |

ಉಪೇಂದ್ರ ನಟನೆಯ “ಯು-ಐ’ ಚಿತ್ರ ಡಿ.20ಕ್ಕೆ ತೆರೆಕಂಡರೆ 5 ದಿನ ಅಂತರದಲ್ಲಿ ಸುದೀಪ್‌ ಅವರ “ಮ್ಯಾಕ್ಸ್‌’ ತೆರೆಕಾಣುತ್ತಿದೆ. ಎರಡೂ ಸ್ಟಾರ್‌ ಸಿನಿಮಾ. ಜೊತೆಗೆ ಪ್ಯಾನ್‌ ಇಂಡಿಯಾ ರಿಲೀಸ್‌.. ಹೀಗಿರುವಾಗ ಇಷ್ಟೊಂದು ಕಡಿಮೆ ಅಂತರದಲ್ಲಿ ತೆರೆಕಂಡು ಕ್ಲಾéಶ್‌ ಮಾಡಿಕೊಳ್ಳುವ ಅಗತ್ಯವೇನು ಎಂಬ ಮಾತು ಚಿತ್ರರಂಗ, ಅಭಿಮಾನಿ ವರ್ಗದಲ್ಲಿ ಕೇಳಿಬರುತ್ತಿದೆ. ಈ ಪ್ರಶ್ನೆಯನ್ನು ಸುದೀಪ್‌ ಅವರಿಗೆ ಕೇಳಿದರೆ ತುಂಬಾ ಜಾಲಿಯಾಗಿಯೇ ಉತ್ತರಿಸುತ್ತಾ ಚಿತ್ರರಂಗದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

Advertisement

“ಉಪೇಂದ್ರ ಅವರ ಸ್ಟಾರ್‌ಡಮ್‌ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಎರಡು ಸಿನಿಮಾ ಒಟ್ಟಿಗೆ ಬರುತ್ತೆ ಅಂದಾಕ್ಷಣ ಯಾಕೆ ಕ್ಲಾಶ್‌ ಅಂತೀರಾ. ಉಪೇಂದ್ರ ಅವರಿಗೆ ಇಲ್ಲದ ತಲೆನೋವು ನಮಗ್ಯಾಕೆ ನಿಮಗ್ಯಾಕೆ.. ಅವರೇ ಈ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಅವರಿಗೂ ಗೊತ್ತು, ನಾವ್ಯಾಕೆ ಅದೇ ಡೇಟ್‌ಗೆ ಬರುತ್ತಿದ್ದೀವಿ ಎಂದು. ಎರಡು ಕನ್ನಡ ಚಿತ್ರ ಬಂದಾಗಲೇ ಬೇರೆ ಚಿತ್ರಗಳ ಹಾವಳಿ ಕಡಿಮೆಯಾಗುತ್ತದೆ, ಇಲ್ಲವಾದರೆ ಪರಭಾಷಾ ಹಾವಳಿ. ಅಷ್ಟೊಂದು ದಿನ ರಜೆಗಳಿವೆ. ಈ ಸಮಯದಲ್ಲಿ ಅವರು ಬರುತ್ತಿದ್ದಾರೆ. ನನ್ನ ಸಿನಿಮಾ ಅಲ್ಲಾಂದ್ರು ಉಪೇಂದ್ರ ಅವರ ಸಿನಿಮಾವನ್ನು ದಯವಿಟ್ಟು ನಂಬಿ. ನನಗೆ ಆ ವ್ಯಕ್ತಿ ಮೇಲೆ ಅಪಾರವಾದ ನಂಬಿಕೆ, ಪ್ರೀತಿ ಇದೆ. ನಾನೇ ಅವರನ್ನು ನಿರ್ದೇಶನ ಮಾಡಿ ಅಂತ ಒತ್ತಾಯಿಸುತ್ತಿದ್ದೆ. ಉಪೇಂದ್ರ ಅವರ ತಂಡಕ್ಕೆ ತೊಂದರೆ ಅಂತ ಅನಿಸಿದರೆ ಅವತ್ತು ನಾವು ಮಾತನಾಡಬಹುದು. ಅವರದ್ದು ಬಹುದೊಡ್ಡ ಚಿತ್ರ. ಅವರ ಸಿನಿಮಾ ಜೊತೆ ಬರ್ತಾ ಇದ್ದೀವಿ ಅಂತ ನಾವು ಯೋಚಿಸಬೇಕೇ ಹೊರತು ಅವರಲ್ಲ. ಇದು ಕ್ಲಾಶ್‌ ಅಲ್ಲ.. ಗುರು ಬರ್ತಾ ಇದ್ದಾರೆ, ಸ್ವಲ್ಪ ದಿನ ಆದ ನಂತರ ನಾವು ಶಿಷ್ಯ ಬರ್ತಾ ಇದ್ದೀವಿ ಅಷ್ಟೇ. ಯಾವ ಹೀರೋಗಳ ನಡುವೆಯೂ ಕ್ಲಾಶ್‌ ಇಲ್ಲ. ಸೋಶಿಯಲ್‌ ಮೀಡಿಯಾದ ಕೆಲವು ಕಮೆಂಟ್ಸ್‌ ನೋಡುವಾಗ ಸಿಲ್ಲಿ ಅನಿಸುತ್ತದೆ’ಎನ್ನುತ್ತಾರೆ ಸುದೀಪ್‌.

ಇನ್ನು ಸಿನಿಮಾದ ರಿಲೀಸ್‌ ಡೇಟ್‌ ನಿರ್ಧಾರದ ಕುರಿತು ಮಾತನಾಡುವ ಸುದೀಪ್‌, ನಾವು ಸಿನಿಮಾ ಮಾಡಬಹುದು, ಆದರೆ ಬಂಡವಾಳ ಹೂಡೋದು ನಿರ್ಮಾಪಕರು. ಅವರಿಗೆ ಅವರದ್ದೇ ಆದ ಪ್ಲ್ರಾನ್‌ ಇರುತ್ತದೆ. ಬೇರೆ ಭಾಷೆಯಲ್ಲೂ ರಿಲೀಸ್‌ ಮಾಡುವಾಗ ಎಲ್ಲವನ್ನು ನೋಡಿಕೊಂಡು, ಯಾವ ಡೇಟ್‌ ವರ್ಕ್‌ ಆಗುತ್ತದೆ ಎಂದು ನೋಡಬೇಕು. ಕೆಲವೊಮ್ಮೆ ನಾವು ನಿರ್ಮಾಪಕರ ನಿರ್ಧಾರವನ್ನು ಗೌರವಿಸಬೇಕು’ ಎಂದರು ಸುದೀಪ್‌.

Advertisement

Udayavani is now on Telegram. Click here to join our channel and stay updated with the latest news.

Next