ಬೆಂಗಳೂರು: ಮಾಗಡಿ ರಸ್ತೆಯಲ್ಲಿದ್ದ ನಟ ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಘಟನೆಯನ್ನು ನಟ ಸುದೀಪ್ ಟ್ವಿಟ್ಟರ್‌ನಲ್ಲಿ ಖಂಡಿಸಿದ್ದಾರೆ.
ಈ ಬಗ್ಗೆ ವೀಡಿಯೋವನ್ನು ಹಂಚಿಕೊಂಡಿರುವ ಅವರು, “ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಒಡೆದಿರುವುದು ಯಾರು ಅಂತ ಗೊತ್ತಾದರೆ ನಿಮ್ಮನ್ನು ಹೀನಾಯವಾಗಿ ಹೊಡೆದುಹಾಕುತ್ತಾರೆ. ನಿಮ್ಮ ಹೆಸರು ಬಯಲಾದ ದಿನ, ದೇಶ ಬಿಟ್ಟು ಓಡಿ ಹೋಗಿ. ಇದು ನಾನು ನಿಮಗೆ ಕೊಡುತ್ತಿರುವ ಸಲಹೆ’ ಎಂದು ಹೇಳಿದ್ದಾರೆ.
“ಒಡೆದು ಹಾಕಿರೋ ಮಹಾನುಭಾವರಿಗೆ, ವಿಷ್ಣು ಸರ್ ಅಭಿಮಾನಿಯಾಗಿ ಒಂದಿಷ್ಟು ವಿಷಯ ಹೇಳಲು ಇಷ್ಟಪಡುತ್ತೇನೆ. ನೀವು ಸಿಕ್ಕಿಬಿದ್ದರೆ ಒಡೆದು ಹಾಕಿರುವ ಉದ್ದೇಶ ಅರ್ಥ ಆಗಲ್ಲ, ಅರ್ಥ ಆಗಲಿಕ್ಕೂ ಸಾಧ್ಯವಿಲ್ಲ. ಮನುಷ್ಯರಾದವರಿಗೆ ಇದು ಅರ್ಥವಾಗಲ್ಲ. ಎಲ್ಲೇ ಕೂತಿದ್ದರೂ ಸಿಕ್ಕಿಹಾಕಿಕೊಳ್ಳದೆ ಇರುವ ಹಾಗೆ ನೋಡಿಕೊಳ್ಳಿ. ನಿಮ್ಮ ಹೆಸರು ಹೊರಬಂದ ದಿನ ಏನಾಗುತ್ತೆ ಎನ್ನುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದು ಸುದೀಪ್ ವೀಡಿಯೋದಲ್ಲಿ ಹೇಳಿದ್ದಾರೆ.
ಈ ಘಟನೆಯನ್ನು ನಟರಾದ ದರ್ಶನ್, ಜಗ್ಗೇಶ್ ಸಹಿತ ಅನೇಕರು ಖಂಡಿಸಿದ್ದಾರೆ.