Advertisement

Max Movie: ಈ ದಿನವೇ ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ರಿಲೀಸ್‌ ಆಗೋದು ಪಕ್ಕಾ?

04:37 PM Aug 22, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ ಅಭಿನಯಯದ (Kiccha Sudeep), ಬಹಳ ನಿರೀಕ್ಷೆ ಹುಟ್ಟಿಸಿರುವ ʼಮ್ಯಾಕ್ಸ್‌ʼ (Max Movie) ಅಪ್ಡೇಟ್ ಗಾಗಿ ಫ್ಯಾನ್ಸ್‌ ಗಳು ಕಾಯುತ್ತಿದ್ದಾರೆ.

Advertisement

ವಿಕ್ರಾಂತ್‌ ರೋಣʼ ಬಳಿಕ ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ಮೂಲಕ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಅನೌನ್ಸ್‌ ಆದ ದಿನದಿಂದ ಇತ್ತೀಚೆಗೆ ಬಂದ ಅಪ್ಡೇಟ್‌ ವಿಚಾರದವರೆಗೂ ಫ್ಯಾನ್ಸ್‌ ಗಳಲ್ಲಿ ʼಮ್ಯಾಕ್ಸ್‌ʼ ಕುತೂಹಲ ಹೆಚ್ಚಾಗಿಸಿದೆ.

ಈಗಾಗಲೇ ಟೀಸರ್‌ ಮೂಲಕ ʼಮ್ಯಾಕ್ಸ್‌ʼ ಹೈಪ್‌ ಹೆಚ್ಚಿಸಿದೆ. ರೌಡಿಗಳ ಅಖಾಡದಲ್ಲಿತ್ತು, ನಿಂತು ಎರಡು ಕೈಗಳಿಂದ ಮಚ್ಚು ಬೀಸಿ ಸಂಹಾರಗೈಯುವ ಮಾಸ್‌ ಲುಕ್‌ ನಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ.

ಟೀಸರ್‌ ಬಳಿಕ ಟ್ರೇಲರ್‌ ಯಾವಾಗವೆಂದು ಫ್ಯಾನ್ಸ್‌ ಕೇಳುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಅಂದರೆ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬದ ತಿಂಗಳಿನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎನ್ನುವ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿದೆ.

Advertisement

ಇದೀಗ ಬಂದಿರುವ ಲೇಟೆಸ್ಟ್‌ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 27ರಂದು ʼಮ್ಯಾಕ್ಸ್‌ʼ ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿದೆ ಎನ್ನಲಾಗಿದೆ. ಬಹುತೇಕ ಈ ದಿನವೇ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಗಳು ಹೆಚ್ಚು ಮಾತುಗಳು ಕೇಳಿಬರುತ್ತಿದೆ.

ಕಾಲಿವುಡ್‌ನ ವಿಜಯ್ ಕಾರ್ತಿಕೇಯನ್ (Vijay Karthikeyan) ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿ ಕ್ರಿಯೇಷನ್ಸ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

ಚಿತ್ರದಲ್ಲಿ ಕಿಚ್ಚ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಬಣ್ಣ ಹಚ್ಚಿದ್ದಾರೆ‌.

ಕಿಚ್ಚನ ಜೊತೆ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ ಭಟ್ ಮುಂತಾದ ಕಲಾವಿದರು ನಟಿಸಿದ್ದಾರೆ.

ಅಂದಹಾಗೆ, “ಮ್ಯಾಕ್ಸ್‌ʼ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next