Advertisement

Kiccha Sudeep: ʼಮ್ಯಾಕ್ಸ್‌ʼ ʼMaximum Massʼ ಸಾಂಗ್ ಔಟ್;‌ ರಗಡ್‌ ಆಗಿ ಕಾಣಿಸಿದ ಕಿಚ್ಚ

10:33 AM Sep 02, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ (Kiccha Sudeep) ಅವರಿಗಿಂದು 51ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳಿಗೆ ಪ್ರೀತಿಯಿಂದಲೇ ಕೈಬೀಸಿ ಹುಟ್ಟುಹಬ್ಬವನ್ನು ಕಿಚ್ಚ ಆಚರಿಸಿಕೊಂಡಿದ್ದಾರೆ. ಈ ಸಂತಸದ ದಿನದಂದು ಅವರ ʼಮ್ಯಾಕ್ಸ್‌ʼ(Max Movie) ಚಿತ್ರತಂಡ ಅಭಿಮಾನಿಗಳಿಗೆ ಮಾಸ್‌ ಆಗಿಯೇ ಒಂದು ಗಿಫ್ಟ್‌ ನೀಡಿದೆ.

Advertisement

ಚಿತ್ರೀಕರಣದ ಸಂದರ್ಭದಿಂದಲೂ, ಆ ಬಳಿಕ ಟೀಸರ್‌ ನಿಂದ ದೊಡ್ಡಮಟ್ಟದ ಹೈಪ್‌ ಹೆಚ್ಚಿಸಿರುವ ʼಮ್ಯಾಕ್ಸ್‌ʼ ರಿಲೀಸ್‌ ಗೆ ಫ್ಯಾನ್ಸ್‌ ಗಳು ವೇಟ್‌ ಮಾಡುತ್ತಿದ್ದಾರೆ.

ʼಮ್ಯಾಕ್ಸ್‌ʼ ಚಿತ್ರದಿಂದ ಕಿಚ್ಚನ ಹುಟ್ಟುಹಬ್ಬಕ್ಕೆ ʼ ಮ್ಯಾಕ್ಸಿಮಾಮ್ ಮಾಸ್‌ʼ(Maximum Mass) ಎನ್ನುವ ಕ್ರೇಜಿ ಲಿರಿಕಲ್‌ ವಿಡಿಯೋ ಹಾಡನ್ನು ರಿಲೀಸ್‌ ಮಾಡಲಾಗಿದೆ.

ಅಜನೀಶ್‌ ಲೋಕನಾಥ್‌ ಸಂಗೀತವಿರುವ ಹಾಡು ಮಾಸ್‌ ಪ್ರಿಯರಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಿಬಂದಿದೆ.

Advertisement

ಅನೂಪ್ ಭಂಡಾರಿ, ರ‍್ಯಾಪರ್ ಎಂಸಿ ಬಿಜ್ಜು ಸಾಹಿತ್ಯ ಬೆಂಕಿಯಂತೆ ಮೂಡಿಬಂದಿದ್ದು, ಕಿಚ್ಚ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚೇತನ್ ಗಂಧರ್ವ ಮತ್ತು ರಾಪರ್ ಎಂ.ಸಿ.ಬಿಜ್ಜು ಪವರ್‌ ಫುಲ್‌ ಆಗಿ ಹಾಡನ್ನು ಹಾಡಿದ್ದಾರೆ.

ಹಾಡಿನ ಕೊನೆಯಲ್ಲಿ ಗಣೇಶ ಹಬ್ಬಕ್ಕೆ ರಿಲೀಸ್‌ ಡೇಟ್‌ ಬಗ್ಗೆ ಅನೌನ್ಸ್‌ ಮೆಂಟ್‌ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಕಾಲಿವುಡ್‌ನ ವಿಜಯ್ ಕಾರ್ತಿಕೇಯನ್ (Vijay Karthikeyan) ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿ ಕ್ರಿಯೇಷನ್ಸ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

ʼಮ್ಯಾಕ್ಸ್‌ʼ ರಿಲೀಸ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮೂಲಗಳ ಪ್ರಕಾರ ಇದೇ ತಿಂಗಳ 27ರಂದು (ಸೆ.27ರಂದು) ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಚಿತ್ರದಲ್ಲಿ ಕಿಚ್ಚ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಬಣ್ಣ ಹಚ್ಚಿದ್ದಾರೆ‌.

ಕಿಚ್ಚನ ಜೊತೆ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ ಭಟ್ ಮುಂತಾದ ಕಲಾವಿದರು ನಟಿಸಿದ್ದಾರೆ.

ಅಂದಹಾಗೆ, “ಮ್ಯಾಕ್ಸ್‌ʼ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.