Advertisement

BBK-11: ಕಿಚ್ಚನ ಹೆಸರು ತೆಗೆದು ಹಾಕಿದ ವಾಹಿನಿ; ಬಿಗ್‌ ಬಾಸ್‌ಗೆ ಸುದೀಪ್‌ ಅನುಮಾನ?

10:47 AM Sep 10, 2024 | Team Udayavani |

ಬೆಂಗಳೂರು: ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಹೊಸ ಸೀಸನ್ ಹೊಸ ಲೋಗೋವನ್ನು ಪರಿಚಯಿಸಿತು.

Advertisement

ಪ್ರತಿ ವರ್ಷಕ್ಕಿಂತ ಈ ವರ್ಷದ ಬಿಗ್‌ ಬಾಸ್‌ ಆರಂಭಕ್ಕೆ ಹೆಚ್ಚಿನ ಕುತೂಹಲವಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಈ ಬಾರಿ ನಿರೂಪಕನ ವಿಚಾರದಲ್ಲಿ ಹುಟ್ಟಿ‌ಕೊಂಡಿರುವ ಪ್ರಶ್ನೆ. ಕಿಚ್ಚ ಸುದೀಪ್‌‌ (Kiccha Sudeep) ಅವರು ಈ ಬಾರಿ ಬಿಗ್‌ ಬಾಸ್ ನಡೆಸಿಕೊಡುವುದು ಅನುಮಾನವೆನ್ನಲಾಗುತ್ತಿದೆ.

ಆದರೆ ಈ ಗೊಂದಲದ ನಡುವೆಯೇ ವಾಹಿನಿ ರಿವೀಲ್‌ ಮಾಡಿದ್ದ ಹೊಸ ಲೋಗೋ ವಿಡಿಯೋದಲ್ಲಿ ಕಿಚ್ಚ ಸುದೀಪ್‌ ಅವರ ಹೆಸರನ್ನು ಹ್ಯಾಷ್‌ ಟ್ಯಾಗ್‌ ಆಗಿ ಬಳಸಲಾಗಿತ್ತು. ಇದರಿಂದ ಕಿಚ್ಚ ಅವರೇ ಶೋ ನಡೆಸಿಕೊಡಲಿದ್ದಾರೆ ಎನ್ನುವ ಮಾತು ಮತ್ತೆ ಮುನ್ನೆಲೆಗೆ ಬಂದಿತ್ತು.

ಆದರೆ ಇದೀಗ ಈ ಲೋಗೋ ವಿಡಿಯೋದಿಂದ ಕಿಚ್ಚ ಸುದೀಪ್‌ ಅವರ ಹೆಸರನ್ನು ತೆಗೆಯಲಾಗಿದೆ. ಹಾಗಾಗಿ ಅವರು ಶೋ ನಡೆಸಿಕೊಡುವ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ.

Advertisement

ಇತ್ತೀಚೆಗೆ ಕಿಚ್ಚ ಸುದ್ದಿಗೋಷ್ಟಿಯಲ್ಲಿ ಬಿಗ್‌ ಬಾಸ್‌ ಬಗ್ಗೆ ಮಾತನಾಡುತ್ತಾ, “ಕಳೆದ 10 ಸೀಸನ್ ನಾನು ಬಿಗ್ ಬಾಸ್ ನಡೆಸಿಕೊಟ್ಟಿದ್ದೇನೆ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅದರ ಹಿಂದಿನ ಕಷ್ಟ ಎಲ್ಲರಿಗೂ ಗೊತ್ತಿಲ್ಲ. ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ” ಎಂದು ಹೇಳಿದ್ದರು.

ಇತ್ತ ಜಿಯೋ ಸಿನಿಮಾ ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ಟೀಸರ್‌ ಶೀಘ್ರದಲ್ಲಿ ಬರಲಿದೆ ಎಂದು ಹಾಕಿಕೊಂಡಿದೆ.

ಕಿಚ್ಚ ಸುದೀಪ್‌ ಹೊಸ ಸಿನಿಮಾಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಬಿಗ್‌ ಬಾಸ್‌ ಗಾಗಿ ಟೈಮ್‌ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ -11 ನಿರೂಪಕರ ಹೆಸರಿನಲ್ಲಿ ರಮೇಶ್‌ ಅರವಿಂದ್‌ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next