ಸಾಮಾಜಿಕ ಕಾರ್ಯಗಳನ್ನೇ ಉದ್ದೇಶವಾಗಿಟ್ಟುಕೊಂಡು ಆರಂಭವಾದ ಕಿಚ್ಚ ಸುದೀಪ್ ಅವರ ಕನಸಿನ “ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ’ ಈಗ ನಾಲ್ಕನೇ ವರ್ಷದ ಸಂಭ್ರಮದಲ್ಲಿದೆ.
ಈ ಚಾರಿಟೇಬಲ್ ಸೊಸೈಟಿ ಆರಂಭವಾಗಿ ಇಂದಿಗೆ (ಫೆ.14ಕ್ಕೆ) ನಾಲ್ಕು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೊಸೈಟಿ ಸಾಕಷ್ಟು ಕಾರ್ಯಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ:ನಾನು ಬಜಾರಿ, ಅವನು ತುಂಬಾ ಸೈಲೆಂಟ್ – ಆದರೂ ಒಳ್ಳೆ ಜೋಡಿ ನಮ್ಮದು !
ಮುಖ್ಯವಾಗಿ ಸೊಸೈಟಿ ಆರಂಭವಾದ ದಿನವನ್ನು ಪ್ರಾಣಿ ಪಕ್ಷಿಗಳ ಸೇವೆಗೆ ಮೀಸಲಿಟ್ಟಿದೆ. ಬೀದಿ ಬದಿಯಲ್ಲಿ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಒಂದು ತುತ್ತು ಅನ್ನ, ನೀರು ನೀಡಲು ಹಾಗೂ ಪಂಜರದಲ್ಲಿ ಬಂಧಿಯಾಗಿರುವ ಪಕ್ಷಿಗಳನ್ನು ಬಿಡುಗಡೆಗೊಳಿಸಲು ಹಾಗೂ ಗೋಶಾಲೆ ಭೇಟಿ ನೀಡುವ ಮೂಲಕ ಸಂಭ್ರಮಿಸಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನಿರ್ಧರಿಸಿದೆ.
ಈ ಮೂಲಕ ಸಾರ್ಥಕ ಸಮಾರಂಭ ಮಾಡಲಿದೆ. ಕಿಚ್ಚ ಸುದೀಪ್ ತಮ್ಮ ಚಾರಿಟೇವಲ್ ಸೊಸೈಟಿನಡಿ ಸಾಕಷ್ಟು ಸಮಾಜ ಮುಖೀ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ.