Advertisement

Kiccha Sudeep Birthday; ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿ ಆಚರಣೆ

11:32 AM Sep 02, 2023 | Team Udayavani |

ನಟ ಕಿಚ್ಚ ಸುದೀಪ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೋವಿಡ್‌ ಮತ್ತಿತರ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಿಂದ ದೂರ ಉಳಿದಿದ್ದ ಸುದೀಪ್‌, ಈ ಬಾರಿ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಲು ನಿರ್ಧರಿಸಿದ್ದಾರೆ.

Advertisement

ನಂದಿ ಲಿಂಕ್ಸ್‌ ಗ್ರೌಂಡ್‌ನ‌ಲ್ಲಿ ಸುದೀಪ್‌ ಅಭಿಮಾನಿಗಳ ಸಮ್ಮುಖದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ ತಮ್ಮ ನೆಚ್ಚಿನ ನಟನನ್ನು ನೋಡಲು ದೂರ ಊರುಗಳಿಂದ ಅಭಿಮಾನಿ

ಗಳು ಸೆ. 1ರ ಸಂಜೆಯಿಂದಲೇ ನಂದಿ ಲಿಂಕ್ಸ್‌ ಗ್ರೌಂಡ್‌ನ‌ತ್ತ ದೌಡಾಯಿಸಿದ್ದರು. ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ, ರಾತ್ರಿ 9ರಿಂದ 12ರ ತನಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಅಭಿಮಾನಿಗಳ ಜೊತೆ ಸುದೀಪ್‌ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

ಹುಟ್ಟುಹಬ್ಬದ ದಿನವಾದ (ಸೆ. 2) ಇಂದು ಇಡೀ ದಿನವನ್ನು ತಮ್ಮ ಅಭಿಮಾನಿಗಳಿಗಾಗಿ ಸುದೀಪ್‌ ಮೀಸಲಿರಿಸಿದ್ದಾರೆ. ಜೆ. ಪಿ ನಗರದ ತಮ್ಮ ಮನೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಅಭಿಮಾನಿಗಳನ್ನ ಭೇಟಿಯಾಗಲಿರುವ ಸುದೀಪ್‌, ಅಭಿಮಾನಿಗಳಿಂದ ಶುಭಾಶಯ ಸ್ವೀಕರಿಸಲಿ ದ್ದಾರೆ. ಇನ್ನು ಸುದೀಪ್‌ ಜನ್ಮದಿನದ ಪ್ರಯುಕ್ತ ಸುದೀಪ್‌ ಅಭಿನಯಿಸಲಿರುವ ಮುಂಬರುವ ಸಿನಿಮಾಗಳ ಟೈಟಲ್‌, ಫ‌ಸ್ಟ್‌ಲುಕ್‌, ಟೀಸರ್‌ ಹೀಗೆ ಒಂದಷ್ಟು ಸರ್‌ಪ್ರೈಸ್‌ ಹೊರಬೀಳುವ ಸಾಧ್ಯತೆಯಿದೆ. ನಟ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ”ಉದಯವಾಣಿ’ ಶುಭಕೋರುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next