Advertisement

Farmers: ನೂರಾರು ಎಕರೆ ಅನ್ನದಾತರ ಕೃಷಿ ಭೂಮಿಗೆ ಕೈ ಹಾಕಿದ ಕೆಐಎಡಿಬಿ!

02:42 PM Feb 21, 2024 | Team Udayavani |

ಚಿಕ್ಕಬಳ್ಳಾಪುರ: ಒಂದಲ್ಲ, ಎರಡಲ್ಲ ಬರೋಬ್ಬರಿ 700 ಎಕೆರೆಗೂ ಅಧಿಕ ಪ್ರಮಾಣದ ಕೃಷಿ ಫ‌ಲವತ್ತಾದ ಭೂಮಿಯನ್ನು ಕೈಗಾರಿಕಾ ಸ್ಥಾಪನೆ ಹೆಸರಲ್ಲಿ ಕೆಐಎಡಿಬಿ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಮುಂದಾಗಿ ರೈತರ ಗಮನಕ್ಕೆ ತರದೇ ರೈತರ ಪಹಣಿಗಳಲ್ಲಿ ಕೆಐಎಡಿಬಿ ಭೂ ಸ್ವಾಧೀನ ಎಂದು ನಮೂದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಸಬಾ ಹೋಬ ಳಿಯ ಬಡಗವಾರಹಳ್ಳಿ ಸಮೀಪ ನೂರಾರು ಎಕರೆ ರೈತರ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ತನ್ನ ವಶಕ್ಕೆ ಪಡೆದುಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೈಗಾರಿಕಾ ಅಭಿವೃದ್ಧಿಗೆಂದೇ ಗುರುತಿಸಿರುವ ಸಾವಿರಾರು ಎಕೆರೆ ಕೈಗಾರಿಕಾ ಅಭಿವೃದ್ಧಿ ಕಾಣದೇ ಪಾಳು ಬಿದ್ದಿದೆ. ಅದರಲ್ಲೂ ಚಿಂತಾಮಣಿ ತಾಲೂಕಿನಲ್ಲಿ ಮಸ್ತೇನಹಳ್ಳಿ ಕೈಗಾರಿಕಾ ಅಭಿವೃದ್ಧಿಗೆಂದು ಮೊದಲ ಹಂತದಲ್ಲಿ ಗುರುತಿಸಿರುವ 793.39 ಎಕರೆ, ಎರಡನೇ ಹಂತದಲ್ಲಿ ಗುರುತಿಸಿರುವ 501.58 ಕೆರೆ ಹಾಗೂ ಮೂರನೇ ಹಂತದಲ್ಲಿ ಗರಿತಿಸಿರುವ 1,494.30 ಜಮೀನು ಒಂದು ಕೈಗಾರಿಕೆ ತಲೆ ಎತ್ತದೇ ಇದುವರೆಗೂ ಇಡೀ ಕೈಗಾರಿಕಾ ಎಸ್ಟೇಟ್‌ ನನೆಗುದಿಗೆ ಬಿದ್ದಿದೆ.

ಇಂತ ಸಂದರ್ಭದಲ್ಲಿ ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯಲ್ಲಿ ಮತ್ತೆ 700 ಎಕರೆಯಷ್ಟು ರೈತರ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆ ಹೆಸರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಭೂ ಸ್ವಾಧೀನಕ್ಕೆಂದು ಪಹಣಿಗಳಲ್ಲಿ ರೈತರ ಗಮನಕ್ಕೆ ತರದೇ ಕೆಐಎಡಿಬಿ ಭೂ ಸ್ವಾಧೀನ ಎಂದು ನಮೂದಿರುವುದು ರೈತರಲ್ಲಿ ತೀವ್ರ ಕಳವಳ ಸೃಷ್ಟಿಯಾಗಿದ್ದು, ಹಲವು ದಶಕಗಳಿಂದ ತಮ್ಮ ಜೀವನೋ ಪಾಯಕ್ಕಾಗಿ ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿರುವ ರೈತರಿಗೆ ಈಗ ಕೆಐಎಡಿಬಿ ಭೂ ಸ್ವಾಧೀನ ವಿಚಾರ ತೀವ್ರ ಆತಂಕವನ್ನು ತಂದೊಡ್ಡಿದೆ.

ಈ ಹಿಂದೆಯೆ ಚಿಂತಾಮಣಿ ತಾಲೂಕಿನ ಕನಿಶೆಟ್ಟಿಹಳ್ಳಿ ಸುತ್ತಮುತ್ತ ಸುಮಾರು 1.391.59 ಎಕರೆ ಜಾಗವನ್ನು ಕೈಗಾರಿಕಾ ಅಭಿವೃದ್ಧಿಗೆ ಜಾಗ ಗುರುತಿಸಲಾಗಿತ್ತು. ಅದು ಡಿಮ್ಡ್ ಫಾರಸ್ಟ್‌ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಅದನ್ನು ಕೈ ಬಿಟ್ಟು ಈಗ ಕೃಷ್ಣರಾಜಪುರ, ಬಡಗವಾರಹಳ್ಳಿ, ದಿಗೂರು ಸುತ್ತಮುತ್ತ 700 ಎಕರೆಯಷ್ಟು ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿ ಈಗಾಗಲೇ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ರೈತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಚಿಂತಾಮಣಿ ತಾಲೂಕಿನಲ್ಲಿ ಕೈಗಾರಿಕಾ ಸ್ಥಾಪನೆಗೆ 700 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳನ್ನೇ ಕೇಳಬೇಕು. ● ವೀರಭದ್ರಯ್ಯ, ಜಂಟಿ ನಿರ್ದೇಶಕರು, ಕೈಗಾರಿಕೆ ಇಲಾಖೆ

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next