Advertisement

ಅಂಗನವಾಡಿಯಲ್ಲಿ ಪುತ್ರಿ “ಖುಷಿ’: ಎಸ್‌ಪಿ ಸುಮನ್‌ ಮಾದರಿ ನಡೆ

01:47 AM Oct 17, 2019 | mahesh |

ಮಡಿಕೇರಿ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸುವ ಈಗಿನ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದು ಸಾಮಾನ್ಯ ವಿಷಯ. ಸರಕಾರಿ ಶಾಲೆ ಅಥವಾ ಸರಕಾರಿ ಅಂಗನವಾಡಿ ಕಡೆಗೆ ಇವರೆಲ್ಲ ತಿರುಗಿಯೂ ನೋಡುವುದಿಲ್ಲ. ಅದರ ಬಗ್ಗೆ ತಾತ್ಸಾರವೇ ಹೆಚ್ಚು.

Advertisement

ಆದರೆ ಕೊಡಗು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಡಿ. ಪನ್ನೇಕರ್‌ ಅವರು ತದ್ವಿರುದ್ಧ ನಿಲುವು ಹೊಂದಿದ್ದಾರೆ. ಅಂಗನವಾಡಿ ಮೂಲಕವೇ ಮೊದಲ ಪಾಠ ಆಗಬೇಕು ಎಂಬುದು ಅವರ ಆಶಯವಾಗಿದೆ. ಅದಕ್ಕಾಗಿ ತಮ್ಮ ಪುತ್ರಿ”ಖುಷಿ’ಯನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿ ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ.

ಮಕ್ಕಳಿಗೆ ಬಾಲ್ಯದಿಂದಲೇ ನೈತಿಕತೆ ಮತ್ತು ಮೌಲ್ಯಗಳ ಪಾಠ ಅಗತ್ಯವೆನ್ನುವ ಕಾರಣಕ್ಕಾಗಿ ಅವರು ಅಂಗನವಾಡಿಗೆ ಸೇರಿಸಿದ್ದಾರೆ. ಸ್ಥಳೀಯ ಅಂಗನವಾಡಿ ವ್ಯವಸ್ಥೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next