Advertisement

ಕನ್ನಡ ಕಿರುತೆರೆಗೆ ಖುಷ್ಬೂ!

10:58 AM Jul 26, 2017 | |

ಕನ್ನಡಕ್ಕೂ, ಖುಷ್ಬೂ ಅವರಿಗೂ ಹಲವು ವರ್ಷಗಳ ನಂಟು. 1988ರಲ್ಲಿ ಬಿಡುಗಡೆಯಾದ “ರಣಧೀರ’ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಅವರು, ಆ ನಂತರ “ಅಂಜದ ಗಂಡು’, “ಯುಗಪುರುಷ’, “ಗಗನ’, “ಹೃದಯಗೀತೆ’, “ಶಾಂತಿ ಕ್ರಾಂತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

ಈಗ್ಯಾಕೆ ಅವರ ಮಾತು ಎಂದರೆ, ಖುಷ್ಬೂ ಅವರು ಮತ್ತೂಮ್ಮೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಹಿರಿತೆರೆಯಲ್ಲಲ್ಲ, ಕಿರುತೆರೆಯಲ್ಲಿ. ಉದಯ ಟಿವಿಯಲ್ಲಿ ನಿರ್ಮಾಣವಾಗುತ್ತಿರುವ “ನಂದಿನಿ’ ಧಾರಾವಾಹಿಯ ನಿರ್ಮಾಣದಲ್ಲಿ ಖುಷ್ಬೂ ಅವರ ಕೈವಾಡವಿದೆ. ಈಗ ಅವರು ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಈ ಚಿತ್ರದಲ್ಲಿ ಅವರು ಪಾರ್ವತಿ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾರ್ವತಿಪುರದಲ್ಲಿ ನಾಟಿ ಔಷಧಿಗಳನ್ನು ಕೊಡುವುದರ ಜೊತೆಗೆ ಜನರ ಕಷ್ಟಗಳನ್ನು ಪರಿಹರಿಸುತ್ತಾ ದೇವತೆಯಂತಿರುವ ಪಾರ್ವತಿ, ಈಗ ಆಗಮನದಿಂದ ನಂದಿನಿಯಲ್ಲಿ ಆಗಬಹುದಾದ ಬದಲಾವಣೆಗಳೇನು ಎಂಬ ಕುತೂಹಲವಿದ್ದರೆ, “ನಂದಿನಿ’ ಧಾರಾವಾಹಿಯನ್ನು ನೋಡಬೇಕು. ಅಂದಹಾಗೆ, ಜುಲೈ 31ರ ಸೋಮವಾರದಂದು “ನಂದಿನಿ’ ಧಾರಾವಾಹಿಗೆ ಖುಷ್ಬೂ ಅವರ ಎಂಟ್ರಿ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next