Advertisement

ಖೇಲೋ ಇಂಡಿಯಾ ಖೋ-ಖೋದಲ್ಲಿ ರಾಜ್ಯಕ್ಕೆ 2 ಕಂಚು

06:25 AM Feb 08, 2018 | |

ಹೊಸದಿಲ್ಲಿ: ಕಳೆದ ಎರಡು ದಿನಗಳಿಂದ ತೀವ್ರ ಪದಕದ ಬರ ಎದುರಿಸಿದ್ದ ಕರ್ನಾಟಕ ತಂಡ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದಲ್ಲಿ 8ನೇ ದಿನವಾದ ಬುಧವಾರ ಎರಡು ಕಂಚಿನ ಪದಕ ಗೆದ್ದಿದೆ.

Advertisement

ಖೋ-ಖೋದಲ್ಲಿ ಕರ್ನಾಟಕ ಬಾಲಕ-ಬಾಲಕಿಯರು ಪದಕ ಗೆದ್ದು ಸಮಾಧಾನ ಮೂಡಿಸಿದರು. ಕರ್ನಾಟಕ ಬಾಲಕರ ತಂಡ 9-12 ಅಂಕಗಳ ಅಂತರದಿಂದ ಮಹಾರಾಷ್ಟ್ರ ವಿರುದ್ಧ ಸೋಲು ಅನುಭವಿಸಿ ಕಂಚಿಗೆ ತೃಪ್ತಿಪಟ್ಟಿತು. ರಾಜ್ಯ ತಂಡವನ್ನು ವೇಣುಗೋಪಾಲ್‌, ಮಣಿಕಂಠನ್‌, ಶರತ್‌, ಕೃಷ್ಣ, ದಿನೇಶ್‌, ಹಾಲೇಶ್‌ ಪ್ರತಿನಿಧಿಸಿದ್ದರು.

ಬಾಲಕಿಯರ ತಂಡ 8-9 ಅಂಕಗಳ ಅಂತರದಿಂದ ಗುಜರಾತ್‌ ತಂಡದ ವಿರುದ್ಧ ಸೋಲು ಅನುಭವಿಸಿತು. ರಾಜ್ಯದ ತಂಡವನ್ನು ಮೋನಾಶ್ರೀ, ಮೇಘನಾ, ಮೋನಿಕಾ, ಅನುಷಾ, ಪವಿತ್ರಾ, ಚೈತ್ರಾ ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next