Advertisement

Khelo India: ಪ್ಯಾರಾ ಗೇಮ್ಸ್‌- ಕೈಗಳಿಲ್ಲದ ಶೀತಲ್‌ ಕೊರಳಿಗೆ ಚಿನ್ನ

11:02 PM Dec 16, 2023 | Team Udayavani |

ಹೊಸದಿಲ್ಲಿ: ಎರಡೂ ಕೈಗಳಿಲ್ಲದ ಆರ್ಚರ್‌ ಶೀತಲ್‌ ದೇವಿ “ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ನಲ್ಲಿ ಚಿನ್ನದ ಪದಕ ಗೆದ್ದು ಮತ್ತೆ ಸುದ್ದಿಯಾಗಿದ್ದಾರೆ.

Advertisement

ಕಂಪೌಂಡ್‌ ಓಪನ್‌ ವಿಭಾಗದಲ್ಲಿ ಶೀತಲ್‌ ದೇವಿ 141 ಅಂಕ ಗಳಿಸಿ ಸ್ವರ್ಣ ಸಾಧನೆಗೈದರು. ತೀವ್ರ ಸ್ಪರ್ಧೆಯೊಡ್ಡಿದ ಉತ್ತರಪ್ರದೇಶದ ಜ್ಯೋತಿ ಬಲಿಯಾನ್‌ 138 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಹರ್ಯಾಣದ ಸರಿತಾ ಕಂಚನ್ನು ತಮ್ಮದಾಗಿಸಿಕೊಂಡರು (137 ಅಂಕ).

ಇತ್ತೀಚೆಗೆ ಹ್ಯಾಂಗ್‌ಝೂನಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಒಂದು ಚಿನ್ನ ಸೇರಿದಂತೆ 2 ಪದಕ ಗೆದ್ದ ಹಿರಿಮೆ ಶೀತಲ್‌ ಅವರದ್ದಾಗಿತ್ತು.

ಪುರುಷರ ರಿಕರ್ವ್‌ ಆರ್ಚರಿ ಸ್ಪರ್ಧೆಯಲ್ಲಿ ಹರ್ಯಾಣದ ಹರ್ವಿಂದರ್‌ ಸಿಂಗ್‌ ಚಿನ್ನ, ಉತ್ತರಪ್ರದೇಶದ ವಿವೇಕ್‌ ಚಿಕಾರ ಬೆಳ್ಳಿ ಹಾಗೂ ಹರ್ಯಾಣದ ಸಾಹಿಲ್‌ ಕಂಚು ಜಯಿಸಿದರು.

ಭವಿನಾಗೆ ಟಿಟಿ ಚಿನ್ನ
ಟೋಕಿಯೊ ಪ್ಯಾರಾಲಿಂಪಿಕ್ಸ್‌ ಟೇಬಲ್‌ ಟೆನಿಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಗುಜರಾತ್‌ನ ಭವಿನಾ ಪಟೇಲ್‌ ಇಲ್ಲಿ ಕ್ಲಾಸ್‌ 4 ಟಿಟಿಯಲ್ಲಿ ಚಿನ್ನ ಗೆದ್ದರು. ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಸಾಧನೆಗೈದಿದ್ದ ಸೋನಾಲ್‌ ಪಟೇಲ್‌ ಇಲ್ಲಿಯೂ ಇದನ್ನು ಪುನರಾವರ್ತಿಸಿದರು.

Advertisement

ರುದ್ರಾಂಶ್‌ಗೆ ಬಂಗಾರ
ಹ್ಯಾಂಗ್‌ಝೂ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿಯಿಂದ ಮಿನುಗಿದ್ದ ಶೂಟರ್‌, ರಾಜಸ್ಥಾನದ ರುದ್ರಾಂಶ್‌ ಖಾಂಡೇಲ್ವಾಲ್‌ ಚಿನ್ನದ ಪದಕ ಜಯಿಸಿದರು. 50 ಮೀ. ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ಅವರು 223.4 ಅಂಕ ಸಂಪಾದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next