Advertisement
“ನಾನು ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲೂಕಿನ ಒಂದು ಹಳ್ಳಿಯವನು. ಅಪ್ಪ ಕೃಷಿಕರು. ಅಮ್ಮ ಗೃಹಿಣಿ. ನಾವು ನಾಲ್ಕು ಜನ ಮಕ್ಕಳು. ನಾನೇ ಕೊನೆಯವನು. 6 ವರ್ಷದವನಿದ್ದಾಗ ಅಕ್ಕನ ಜತೆ ಅವಸರದಲ್ಲಿ ರಸ್ತೆ ದಾಟುತ್ತಿದ್ದವ, ಇದ್ದಕ್ಕಿದ್ದಂತೆ ಎಡವಿ ಬಿದ್ದುಬಿಟ್ಟೆ. ಅದೇ ಸಮಯಕ್ಕೆ ವೇಗವಾಗಿ ಬಂದ ಬಸ್ ನನ್ನ ಕೈಮೇಲೆ ಹೋಗಿ ಬಿಡ್ತು. ಆಗ ಹೋ… ಎಂದು ಚೀರಿಕೊಂಡಿದ್ದು ಮಾತ್ರ ಗೊತ್ತು ನನಗೆ. ಮತ್ತೆ ಎಚ್ಚರಾದಾಗ ಆಸ್ಪತ್ರೆಯಲ್ಲಿದ್ದೆ.
Related Articles
Advertisement
ನಾನು ಕ್ರಿಕೆಟ್ ಆಡುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. ಆದರೆ ಅಪ್ಪ ಗುಟ್ಟಾಗಿ ಕ್ರಿಕೆಟ್ ಕಿಟ್ ತಂದು ಕೊಟ್ಟಿದ್ರು. ಇದು ಗೊತ್ತಾ ದಾಗ ಉಳಿದವರೆಲ್ಲ ಗೇಲಿ ಮಾಡಿದ್ದರು. ನನ್ನೊಳಗಿನ ಹಠಮಾರಿ ಎದ್ದುನಿಂತದ್ದೇ ಆಗ. ಜೋರಾಗಿ ಬ್ಯಾಟ್ ಬೀಸಲು ಭುಜದಲ್ಲಿ ಶಕ್ತಿ ಇರಬೇಕು ಅನ್ನಿಸಿದಾಗ ಸ್ವಿಮ್ಮಿಂಗ್‌ಗೆ ಸೇರಿ, ಕೆಲವೇ ತಿಂಗಳಿನಲ್ಲಿ ಕಟ್ಟುಮಸ್ತಾದ ದೇಹಾಕೃತಿ ಪಡೆದೆ. ಮೈದಾನದಲ್ಲಿ ಗಂಟೆಗಟ್ಟಲೆ ಬೆವರು ಹರಿಸಿ, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಪಳಗಿದೆ. ಪದೇ ಪದೆ ಗಾಯಗಳಾದಾಗ ನನ್ನನ್ನು ನಾನೇ ಸಂತೈಸಿಕೊಂಡೆ. ಅಲ್ಲದೆ ಇತರ ತಂಡದಲ್ಲೂ ಆಡುತ್ತೇನೆ. ನನ್ನ ಬಗ್ಗೆ ಕ್ರಿಕೆಟ್ ಕ್ಲಬ್‌ಗಳಿಗೆ ಗೊತ್ತಾಗಿದೆ, ನನಗೆ ಪ್ರಾಯೋಜಕರು ಸಿಕ್ಕಿದ್ದಾರೆ.
ನಾನು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದು 2017ರಲ್ಲಿ. ಮುಂದೆ ದಕ್ಷಿಣ ವಲಯ ತಂಡಕ್ಕೆ ಆಡಿದೆ. 2019-20ರಲ್ಲಿ ಇಂಡಿಯಾ ಎ ತಂಡಕ್ಕೆ ಆಡಿದೆ. ಸರಣಿ ಪುರುಷೋತ್ತಮ ಅನ್ನಿಸಿಕೊಂಡೆ. 2022ರಲ್ಲಿ ಭಾರತ ತಂಡದ ಆಟಗಾರನಾಗಿ ಆಡಿದೆ. ಹರಿಯಾಣದಲ್ಲಿ ನಡೆದ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆದೆ. ಅದೊಮ್ಮೆ ನೇಪಾಲದ ಎದುರು ಏಳನೇ ಕ್ರಮಾಂಕದಲ್ಲಿ ಆಡಲು ಹೋದಾಗ 11 ಬಾಲ್‌ನಲ್ಲಿ 32 ರನ್ ಹೊಡೆದಿದ್ದೆ. ಇವು ಮತ್ತು ಉತ್ತಮವಾಗಿ ಆಡಿ ಪಂದ್ಯಗಳನ್ನು ಗೆದ್ದಿರುವ ಸಂದರ್ಭಗಳು, ನನ್ನ ಬದುಕಿನ ಮರೆಯಲಾಗದ ಕ್ಷಣಗಳು. 19 ಶತಕಗಳು, 91 ಅರ್ಧ ಶತಕಗಳು ಸೇರಿದಂತೆ ಒಟ್ಟು 18,000 ರನ್‌ಗಳನ್ನು ಕಲೆಹಾಕಿದ್ದೇನೆ.
ಕ್ರಿಕೆಟ್ ಪ್ರಾಕ್ಟಿಸ್‌ಗೆ ಅವಕಾಶ ಕೊಡಬೇಕು ಅಂತ ವಿನಂತಿಸಿ ಕೊಂಡೇ ಎಕ್ಸಲೆಂಟ್ ಅನ್ನುವ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದೇನೆ. ನಮ್ಮ ವಿಭಾಗದ ಮುಖ್ಯಸ್ಥರು ಖುಷಿಯಿಂದ ಒಪ್ಪಿದ್ದಾರೆ. ಫಿಟೆ°ಸ್ ಅಕಾಡೆಮಿಯೊಂದರಲ್ಲಿ ಪರಿಚಯವಾದ ವಿಶಾಲ್ ಅವರಿಂದ ಕಿಕ್ ಬಾಕ್ಸಿಂಗ್ ಕಲಿತಿದ್ದೇನೆ. “ನೋಡೂ, ಎದುರಾಳಿಗೆ ಎರಡೂ ಕೈ ಇರುತ್ತವೆ. ನಿನಗೆ ಒಂದೇ ಕೈ. ಅದೇ ನಿನ್ನ ಶಕ್ತಿ ಅನ್ನುವುದನ್ನು ಅರ್ಥ ಮಾಡ್ಕೊ. ನಿನ್ನ ಪಂಚ್ ಯಾವುದೇ ಸಂದರ್ಭದಲ್ಲೂ ಮಿಸ್ ಆಗುವಂತಿಲ್ಲ’ ಎಂದದ್ದು ಮಾತ್ರವಲ್ಲ; ಕಿಕ್ ಬಾಕ್ಸಿಂಗ್‌ನ ಹಲವು ಪಟ್ಟು ಮತ್ತು ಗುಟ್ಟು ಗಳನ್ನು ವಿಶಾಲ್ ಸರ್ ಹೇಳಿಕೊಟ್ಟರು. ವಾರದ ಹಿಂದೆ ಮುಂಬ ಯಿಯಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ, 70 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ಗೆದ್ದು ಬಂದೆ!
ಆದರೆ ಯಾವ ಸಂದರ್ಭದಲ್ಲೂ ನನಗೆ ಯಾವುದೇ ಎನ್‌ಜಿಒ ಆಗಲಿ, ಸರಕಾರವಾಗಲಿ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಕ್ರೀಡಾಪಟುಗಳಿಗೆ ಸರಕಾರ, ಸಂಘಸಂಸ್ಥೆಗಳು ಉದಾರವಾಗಿ ಸಹಾಯ ಮಾಡಬೇಕು ಅನ್ನುತ್ತಾ ತನ್ನ ಮಾತುಗಳಿಗೆ ಫುಲ್ ಸ್ಟಾಪ್ ಹಾಕಿದ ಶಿವಶಂಕರ್.
ಎರಡು ಪ್ರಮುಖ ಕ್ರೀಡೆಗಳಲ್ಲಿ ಮಿಂಚುತ್ತಿರುವ ಶಿವಶಂಕರ್‌ನ ಆಟದ ಸೊಬಗನ್ನು ನೋಡಬೇಕೆಂದರೆ: https://instagram.com/shiva_subbarayappaಈ ಹುಡುಗನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ- 7975587909. ಎ.ಆರ್.ಮಣಿಕಾಂತ್